ಬಿಜೆಪಿ ( BJP ) ರೌಡಿ ರಾಜಕೀಯ ಸಮರ್ಥನೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ( M.B PATIL ) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗೆ ನಾಯಕರಿಗೆ ಒಂದು ಅಭ್ಯಾಸ ಇದೆ. ಭ್ರಷ್ಟಾಚಾರ ಅಂದಾಗ ಕಾಂಗ್ರೆಸ್ ನಲ್ಲಿ ಇರಲಿಲ್ವಾ ಅಂತಾರೆ.
ನಾವು ವಿರೋಧ ಪಕ್ಷದಲ್ಲಿ ಇದ್ದೇವೆ. ಭ್ರಷ್ಟಾಚಾರ ಬಗ್ಗೆ ಮಾತನಾಡಲೇಬೇಕು. ೪೦% ಕಮಿಷನ್ ಭ್ರಷ್ಟಾಚಾರ ವಿಚಾರ ಎತ್ತಿದ್ವಿ. ಈಗ ಕಾಂಗ್ರೆಸ್ ಭ್ರಷ್ಟಾಚಾರ ಬಗ್ಗೆ ಅವರು ಮಾತನಾಡ್ತಾರೆ. ಈಗ ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಟಿಕೆಟ್ ನೀಡುವ ಮಾತುಕತೆ ಆಗಿತ್ತು. ಡಿ ಕೆ ಶಿವಕುಮಾರ್ ( D.K SHIVKUMAR ) ಮೇಲೆ ಯಾವುದೇ ಆರೋಪ ಇಲ್ಲ. ನಲಪಾಡ್ ಮೇಲೆ ಕೇಸ್ ಇದೆ ತನಿಖೆ ನಡೆಯುತ್ತಿದೆ. ಆದ್ರೆ ಯಾವುದೇ ಆರೋಪ ಸಾಬೀತು ಆಗಿಲ್ಲ ಎಂದು ಡಿಕೆಶಿ ಹಾಗೂ ನಲಪಾಡ್ ಪರ ಪಾಟೀಲ್ ಬ್ಯಾಟಿಂಗ್ ಮಾಡಿದ್ರು. ಸಂತರು ಇದ್ದವರಿಗೆ ಹಿನ್ನೆಲೆ ಇರುತ್ತೆ, ರೌಡಿಗಳಿಗೆ ಭವಿಷ್ಯ ಇರುತ್ತೆ. ರೌಡಿಗಳು ಬದಲಾವಣೆ ಆಗಬೇಕು, ಅವಾಗ ಸಮಾಜ ಒಪ್ಪುತ್ತೆ. ಬದಲಾವಣೆ ಆದ್ರೆ ರೌಡಿಗಳು ರಾಜಕೀಯ ಮಾಡಬಹುದು. ಬದಲಾಗದೆ ರಾಜಕೀಯ ಮಾಡಿದ್ರೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಹೇಳಿದ್ರು. ಇದನ್ನೂ ಓದಿ : – ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ವೈದ್ಯರ ನಿರ್ಲಕ್ಷ್ಯ – ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಹಸುಗೂಸು ಬಲಿ
ಸಿದ್ದರಾಮುಲ್ಲಾ ಖಾನ್ ಅಂತ ಸಿ. ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮುಲ್ಲಾ ಖಾನ್ ಅಂದಿದ್ದು ಜನರು ಗಮನಿಸಿದ್ದಾರೆ. ಸಿದ್ದರಾಮಯ್ಯ ( SIDDARAMAIAH ) ಅವರ ಹೆಸರು ಅವರ ಮನೆ ದೇವರಿಂದ ಬಂದಿದ್ದು. ಸಿ.ಟಿ ರವಿ ಮೊದಲು ಕ್ಷಮೆ ಕೇಳಬೇಕು ಎಂದು ಹೇಳಿದ್ರು.
ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸೊಲ್ಲಾಪುರ, ಜತ್ತ, ಅಕ್ಕಲಕೋಟೆಯಲ್ಲಿ ಕನ್ನಡಿಗರಿದ್ದಾರೆ. ಮಹಾರಾಷ್ಟ್ರ ( MAHARASTRA ) ಈ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಭಿವೃದ್ಧಿ ಅನ್ನೋದೆ ಈ ಭಾಗದಲ್ಲಿ ಇಲ್ಲ. ಈಗ ಬೆಳಗಾವಿ ಬೇಕು ಅಂತಿದ್ದಾರೆ. ಮೊದಲು ಅವರ ಭಾಗ ಅಭಿವೃದ್ಧಿ ಮಾಡಲಿ. ಬೆಳಗಾವಿ ಗಡಿ ವಿವಾದ ಮುಗಿದ ವಿಚಾರ. ಮಹಾರಾಷ್ಟ್ರ ಸುಮ್ಮನೆ ರಾಜಕೀಯ ಮಾಡುತ್ತಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ : – ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ನಾಳೆಯಿಂದ ಮಳೆಯ ಅಬ್ಬರ ಸಾಧ್ಯತೆ