ನನಗೆ ಕೊಲೆ ಬೆದರಿಕೆ ಬಂದಿರುವುದು ನೂರಕ್ಕೆ ನೂರು ಸತ್ಯ. ಆಯುಧ ಪೂಜೆ ದಿನ ಸಿಎಂ ಬಸವರಾಜ ಬೊಮ್ಮಾಯಿ ( BASAVARAJ BOMMAI ) ಮತ್ತು ಗೃಹ ಸಚಿವರನ್ನ ಭೇಟಿಯಾಗಿ ಕೊಲೆ ಬೆದರಿಕೆ ಬಗ್ಗೆ ವಿವರಣೆ ಕೊಟ್ಟಿದ್ದೇನೆ. 1 ತಿಂಗಳ ಹಿಂದೆ ಕಮಿಷನರ್ ಗೆ ದೂರು ಕೂಡ ಕೊಟ್ಟಿದ್ದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ( SURESH GOWDA ) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಶಕ್ತಿಶಾಲಿಯಾಗಿದೆ. ಗುಪ್ತಚರ ಇಲಾಖೆಯಿಂದ ವರದಿ ಬಂದಿದೆ. ತನಿಖೆ ನಡೆಯುತ್ತಿದೆ. ಹಾಗಾಗಿ ಮೀಡಿಯಾ ಮುಂದೆ ಬಂದಿರಲಿಲ್ಲ. ಇನ್ನು ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ ರಾಜಕಾರಣ ನಡೆಯುತ್ತೆ. ವ್ಯಕ್ತಿಗತ ಆರೋಪ ಯಾರು ಮಾಡೋದಿಲ್ಲಾ. ರಾಜಕೀಯವಾಗಿ ವಿರೋಧ ಮಾಡುತ್ತಾರೆ, ಹೊರೆತು ಕೊಲೆ ಮಾಡುವಷ್ಟು ನೀಚ ರಾಜಕಾರಣಕ್ಕೆ ಯಾರು ಇಳಿದಿಲ್ಲ ಎಂದು ಹೇಳಿದ್ರು.
ಸುರೇಶ್ ಗೌಡರನ್ನ ಕೊಲೆ ಮಾಡಬೇಕು ಎಂದು ಶಾಸಕ ಗೌರಿಶಂಕರ್, ( GOWRI SHANKAR ) ಅಟಿಕಾ ಬಾಬು ಸೇರಿ 5 ಕೋಟಿ ಹಣ ನೀಡಿರುತ್ತಾರೆ. ಹಿರೇಹಳ್ಳಿ ಮಹೇಶ್, ಜೈಲಿನಲ್ಲಿರೋ ಒಬ್ಬ ಖೈದಿಗೆ ಸುಮಾರು ಭಾರಿ ಪೋನ್ ಮಾಡಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ ಎಲ್.ಹೆಚ್ನಲ್ಲಿ ಶಾಸಕ ಗೌರಿಶಂಕರ್ರನ್ನ ಅಟಿಕಾ ಬಾಬು ಭೇಟಿಯಾಗಿರೋ ಬಗ್ಗೆ ಮಾಹಿತಿ ಇದೆ. ಸರ್ಕಾರದಲ್ಲಿರೋ ಇಂಟೆಲಿಜೆನ್ಸ್ ತುಂಬಾ ಪ್ರಬಲವಾಗಿರುವುದರಿಂದ ಎಲ್ಲಾ ಮಾಹಿತಿ ಲಭ್ಯವಾಗಿದೆ. ಗೌರಿಶಂಕರ್ ಭಾಗಿಯಾಗಿದ್ದಾರೋ ಇಲ್ವೋ ಗೊತಿಲ್ಲಾ. ಆದರೆ ತನಿಖೆ ಆಗಬೇಕು. ಇದರ ಹಿಂದೆ ಎಷ್ಟೇ ದೊಡ್ಡ ವ್ಯಕ್ತಿ ಇದ್ದರೂ ತನಿಖೆ ಆಗಬೇಕು. ಗೌರಿಶಂಕರ್ ಹಿಂಬಾಲಕ ಹಿರೇಹಳ್ಳಿ ಮಹೇಶ್ ಜೈಲಿನಲ್ಲಿರೋ ಖೈದಿಗೆ ಕರೆ ಮಾಡಿ ಮಾತನಾಡಿರೋ ಪೋನ್ ನಂಬರ್ ಕೂಡ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ : – ಕಾಂಗ್ರೆಸ್ ಅಪರೂಪಕ್ಕೆ ಒಳ್ಳೆ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ – ಅಶ್ವಥ್ ನಾರಾಯಣ್
ಸತ್ಯ ಇಲ್ಲದೇ ನಾನು ಯಾರ ಮೇಲೂ ಆರೋಪ ಮಾಡೋದಿಲ್ಲಾ. ನಕಲಿ ವ್ಯಾಕ್ಸಿನ್, ನಕಲಿ ಬಾಂಡ್ ಬಗ್ಗೆ ತಕರಾರು ಅರ್ಜಿಯ ತನಿಖೆ ನಡೆಯುತ್ತಿದೆ. ಅವರ ಬ್ಯಾಗ್ರೌಂಡ್ ಕೊರಟಗೆರೆಯಲ್ಲಿಅವರ ತಂದೆ ಯಾರು ಯಾರಿಗೆ ಏನೇನ್ ಮಾಡಿದ್ದಾರೆ ಗೊತ್ತಿದೆ. ಗ್ರಾಮಾಂತರ ಜನರು ಮುಗ್ಧರಿದ್ದಾರೆ. ಇಲ್ಲಿ ಕೂಡ ಏನೋ ಮಾಡೋಕೆ ಹೋದರು, ಆದರೆ ನಾವು ಬಿಟ್ಟಿಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಇದನ್ನೂ ಓದಿ : – ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಕ್ಷಮೆ ಕೇಳಿದ ಕುಮಾರಸ್ವಾಮಿ