ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇವಿ –ಜಾಗೃತಿ ಪೋರ್ಟಲ್ (EV-Jagruthi portal) ಮತ್ತು ಬೆಂಗಳೂರು (Bengaluru) ನಗರವನ್ನು ಇವಿ ವಲಯನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿಯನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ (Sunil kumar) ಉದ್ಘಾಟಿಸಿದ್ದಾರೆ.
ನಂತರ ಮಾತನಾಡಿದ ಸಚಿವರು ರಾಜ್ಯದಲ್ಲಿ ಚಾರ್ಜಿಂಗ್ ಪಾಯಿಂಟ್ ಗಳನ್ನ ಹೆಚ್ಚಳ ಮಾಡಲಿದ್ದೇವೆ, ರಾಜ್ಯದಲ್ಲಿ ಮೊದಲ ಹಂತವಾಗಿ 1000 ಚಾರ್ಜಿಂಗ್ ಪಾಯಿಂಟ್ (Charging point) ನಿರ್ಮಾಣ ಮಾಡಲಾಗುವುದು, ಇದಕ್ಕಾಗಿ ರಾಜಾದ್ಯಂತ ಅಭಿಯಾನ ಮಾಡಲಿದ್ದೇವೆ. ಅಭಿಯಾನದ ಮೂಲಕ EV ಬಗ್ಗೆ ಜಾಗೃತಿ ಮೂಡಿಸುವತ್ತ ನಮ್ಮ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ರು. ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ ಎಲ್ಲಿಸ್ (Alex eris) ಮಾತನಾಡಿ ಭಾರತ ದಿನೇ ದಿನೇ ಎತ್ತರಕ್ಕೆ ಬೆಳಿತಾಯಿದೆ. ಅದರಲ್ಲೂ ಕರ್ನಾಟಕ ರಾಜ್ಯ ಅತ್ಯ0ತ ವೇಗವಾಗಿಯೇ ಸಾಗುತ್ತಿದ್ದು ಟೆಕ್ನಾಲಜಿ ಇರಬಹುದು ಅಥವಾ ಬೇರೆ ವಿಚಾರದಲ್ಲಿಯೂ ಅಭಿವೃದ್ಧಿ ಆಗ್ತಾ ಇದೆ, ಬೆಂಗಳೂರನ್ನ ಗ್ರೀನ್ ಸಿಟಿ ಮಾಡುವತ್ತ ಸರ್ಕಾರ ಶ್ರಮವಹಿಸುತ್ತಿದ್ದು ಭಾರತ (India) ಮತ್ತು ಇಂಗ್ಲೆಂಡ್ (England) ನಡುವೆ ಸಾಕಷ್ಟು ಕಾ0ಪ್ಲಿಕೇಟೆಡ್ ಹಿಸ್ಟರೀ ಇದೆ,ನಾವೆಲ್ಲಾ ಸೇರಿ ಒಂದು ಹೊಸದನ್ನ ಮಾಡೋಣ ಅಂತ ತೀರ್ಮಾನಿಸದ್ದೇವೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಬೊಮ್ಮಸಂದ್ರ- ಹೊಸೂರು ನಡುವೆ ಮೆಟ್ರೋ ರೈಲು ವಿಸ್ತರಣೆ ಯೋಜನೆಗೆ ಕರ್ನಾಟಕ ಅನುಮೋದನೆ