ಕೆ.ಆರ್ ಪುರಂ ಇನ್ಸ್ ಪೆಕ್ಟರ್ ನಂದೀಶ್ ( nadeesh ) 70 -80 ಲಕ್ಷ ಕೊಟ್ಟು ಬಂದಿದ್ದರು ಎಂಬ ಸಚಿವ ಎಂ.ಟಿ.ಬಿ ನಾಗರಾಜ್ ( mtb nagaraj ) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ( Araga Jnanendra) ಪ್ರತಿಕ್ರಿಯೆ ನೀಡಿದ್ದಾರೆ.
ಎಂ.ಟಿ.ಬಿ ನಾಗರಾಜ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಬಳಿ ನಾನು ಮಾಹಿತಿ ಪಡೆಯುತ್ತೇನೆ. ಸದ್ಯ ಅವರು ಕಲ್ಬುರ್ಗಿಯಲ್ಲಿದ್ದಾರೆ. ಈ ಬಗ್ಗೆ ಅವರೇ ಇವತ್ತು ಸ್ಪಷ್ಟೀಕರಣ ಕೊಡಲಿದ್ದಾರೆ. ತಡ ರಾತ್ರಿಯವರೆಗೂ ಕ್ಲಬ್ ,ಪಬ್ ಓಪನ್ ಮಾಡುತ್ತಿದ್ದಾರೆ. ಇದನ್ನೂ ಓದಿ : – ನಮ್ಮದು 3 ಬಾಗಿಲು ಆದರೆ ಬಿಜೆಪಿಯವರದ್ದು ಮನೆಯೊಂದು 12 ಬಾಗಿಲು – ಡಿ.ಕೆ ಶಿವಕುಮಾರ್
ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೆ. ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು .ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಹೀಗಾಗಿ ಕೆ.ಆರ್ ಪುರಂ ಇನ್ಸೆಪೆಕ್ಟರ್ ನಂದೀಶ್ ಸಸ್ಪೆಂಡ್ ಮಾಡಿದ್ದರು. ಆದ್ರೆ ಅವರಿಗೆ ಹೃದಯಘಾತ ಆಗಿದೆ. ಇದೊಂದು ದುರದೃಷ್ಟಕರ ಘಟನೆ. ಇದಕ್ಕೆ ಬೇರೆ ಯಾವುದೋ ಅರ್ಥ ಕಲ್ಪಿಸೋದು ಬೇಡ ಎಂದು ಹೇಳಿದ್ರು.
ಇದನ್ನೂ ಓದಿ : – ರಾತ್ರಿ ವೇಳೆ ಒಬ್ಬಂಟಿಯಾಗಿ ತೆರಳುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಇವರ ಟಾರ್ಗೆಟ್..!