ತಾಕತ್ ಇದ್ರೆ ನನ್ನ ಎದುರು ಹಸು ತಿನ್ನಿ – ಸಿದ್ದರಾಮಯ್ಯ, ಖರ್ಗೆಗೆ ಪ್ರಭು ಚೌಹಾಣ್ ಸವಾಲು

ನಾವೇ ಗೋಹತ್ಯೆ ಕಾಯ್ದೆ ಮಾಡಿದ್ದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ.

ನಾವೇ ಗೋಹತ್ಯೆ ಕಾಯ್ದೆ ಮಾಡಿದ್ದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ( CONGRESS )ನಾಯಕರು ಸುಳ್ಳು ಆರೋಪ ಮಾಡಿದ್ದಾರೆ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ.

Karnataka elections: Congress likely to release first list of candidates  today; Siddaramaiah's son, most sitting MLAs likely to get tickets-Politics  News , Firstpost

1964ರಲ್ಲಿ ನಿಜಲಿಂಗಪ್ಪ ( NIJALINGAPPA ) ಸಿಎಂ ಇದ್ರು. ಆಗ ಕೇಂದ್ರ – ರಾಜ್ಯದಲ್ಲಿ ಅವರೇ ಆಡಳಿತದಲ್ಲಿದ್ದು ಅವರೇ ಕಾಯ್ದೆ ಮಾಡಿದ್ದಾರೆ. ಈಗ ನಾವೇ ಗೋಹತ್ಯೆ ಕಾಯ್ದೆ ಮಾಡಿದ್ದು ಅಂತಿದ್ದಾರೆ. ಆಗ ನಾಮಕಾವಸ್ಥೆಗೆ ಆ ಕಾಯ್ದೆ ಮಾಡಿದ್ರು. ಆಗ ಈ ಆಕ್ಟ್ ನಲ್ಲಿ ಧಮ್ ಇರಲಿಲ್ಲ. ನಾವೀಗ ಅದನ್ನ ಬೀಗಿ ಮಾಡುತ್ತಿದ್ದೇವೆ ಅಷ್ಟೇ. ಹಳೆ ಕಾಯ್ದೆಯಲ್ಲಿ 1000 ದಂಡ 6 ತಿಂಗಳು ಸಜೆ ಇತ್ತು . ನಮ್ಮ ಸರ್ಕಾರ ಬಂದ ಮೇಲೆ 3 ರಿಂದ 7 ವರ್ಷ ಶಿಕ್ಷೆ ಗೆ ಏರಿಸಲಾಗಿದೆ. ದಂಡವನ್ನು ಸಾವಿರದಿಂದ 50 ಸಾವಿರಕ್ಕೆ ಏರಿಸಿದ್ದೇವೆ. ಮೂರುವರೆ ವರ್ಷದಿಂದ ಗೋ ರಕ್ಷಕನಾಗಿ ಕೆಲಸ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡಲು ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು. ದೇಶದಲ್ಲೇ ಮೊದಲಬಾರಿಗೆ ಪಶು ಆ್ಯಂಬುಲೆನ್ಸ್ ಗೆ ಚಾಲನೆ ಮಾಡಿದ್ದೇವೆ. ಇದನ್ನೂ ಓದಿ : –  ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ತಾರಾ

Siddaramaiah Photo Gallery: Latest Pictures, Best News ...

ನಮ್ಮ ಸರ್ಕಾರ ಬಂದ್ರೆ ಗೋ ಹತ್ಯೆ ನಿಷೇಧ ಕಾಯಿದೆ ತೆಗೆದು ಹಾಕುವ ಸಿದ್ದರಾಮಯ್ಯ ( SIDDARAMAIAH ) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನೀ ಯಾರ್ರಪ್ಪ ಗೋ ಹತ್ಯೆ ನಿಷೇಧ ಕಾಯಿದೆ ತೆಗೀತ್ತೀನಿ ಅನ್ನೋಕೆ..? ನನ್ನ ಮುಂದೆ ಹಂದಿ ತಿಂತ್ತೀನಿ, ಹಸು ತಿಂತ್ತೀನಿ ಅಂತೀರಲ್ಲ ತಾಕತ್ ಇದ್ರೆ ನನ್ನ ಎದುರುಗಡೆ ಹಸು ತಿನ್ನಿ. ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದು ಸಿದ್ದರಾಮಯ್ಯ ಮತ್ತೆ ಮಲ್ಲಿಕಾರ್ಜುನ ಖರ್ಗೆಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : – ಹನುಮ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ವ್ಯಕ್ತಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!