ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಸ್ವಾತಂತ್ರ್ಯ ನಂತರ ಶುರುವಾದ ಬೆಳಗಾವಿ ( BELGAVI ) ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸುಪ್ರೀಂ ಕೋರ್ಟ್ ( SUPREM COURT ) ನಲ್ಲಿ ವಿಚಾರಣೆ ನಡೆಯಲಿದೆ.
ಈ ಹಿನ್ನೆಲೆ ವಿಪಕ್ಷನಾಯಕರಿಗೆ ಸಿಎಂ ಬೊಮ್ಮಾಯಿ ಪತ್ರ ಬರೆದಿದ್ದು ಸುಪ್ರೀಂ ಕೋರ್ಟ್ ವಿಚಾರಣೆಯ ಬಳಿಕ ಶೀಘ್ರ ಸಭೆ ನಿಗದಿಗೆ ಚಿಂತಿಸಿದ್ದಾರೆ. ಸಿಎಂ ಬೊಮ್ಮಾಯಿ ( BASAVARAJ BOMMAI ) ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ( SIDDARFAMAIAHA ) ಹಾಗೂ ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್ ಗೆ ಬರೆದ ಪತ್ರದಲ್ಲಿ ಸರ್ಕಾರ ತೆಗೆದುಕೊಂಡ ನಿಲುವು, ವಕೀಲರ ತಂಡ ರಚನೆ ಹಾಗೂ ಕೈಗೊಂಡ ಕ್ರಮ ಕುರಿತು ಪತ್ರದ ಮೂಲಕ ಲಿಖಿತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : – ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ…!
ಸತತ 18 ವರ್ಷಗಳ ಬಳಿಕ ಮತ್ತೆ ಕಾನೂನು ಸಮರ ಶುರುವಾಗಿದೆ. ಇಂದು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಗಡಿ ತಗಾದೆಯ ವಿಚಾರಣೆ ನಡೆಯಲಿದೆ. ಅತ್ತ ಮಹಾರಾಷ್ಟ್ರ, ಇತ್ತ ಕರ್ನಾಟಕ ( KARANATAKA )ಎರಡೂ ರಾಜ್ಯಗಳು ಕಾನೂನು ರೀತಿಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಕೋರ್ಟ್ ಕಟೆಕಟೆಯಲ್ಲಿ ವಾದ ಮಂಡಿಸಲು ಸಜ್ಜಾಗಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇಂದು, ನಿನ್ನೆಯದಲ್ಲ. 1956ರಿಂದಲೂ ಮಹಾರಾಷ್ಟ್ರ ಸರ್ಕಾರ ನಾಡದ್ರೋಹಿ ಎಂಇಎಸ್ ಗೆ ಪ್ರಚೋದನೆ ನೀಡುತ್ತಲೇ ಬಂದಿದೆ. ಬೆಳಗಾವಿ ಸೇರಿ ಕರ್ನಾಟಕದ 4 ಜಿಲ್ಲೆಯ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ಅಂತಿಮ ವಿಚಾರಣೆ ಇಂದು ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ಸರ್ಕಾರಗಳ ವಾದ ಪ್ರತಿವಾದವನ್ನು ಇಂದು ಸುಪ್ರೀಂ ಕೋರ್ಟ್ ಆಲಿಸಲಿದೆ.
ಇದನ್ನೂ ಓದಿ : – ಬೆಳ್ಳಂಬೆಳಗ್ಗೆ ಖಾಕಿ ಕಾರ್ಯಾಚರಣೆ – 86 ರೌಡಿಶೀಟರ್ ಗಳ ಮನೆ ಮೇಲೆ ದಾಳಿ