ಉಬರ್, ಓಲಾ ಆಟೋಗಳಿಗೆ ಕಿ.ಮೀ. ಗೆ 30 ರೂ ನಿಗದಿ – ಸಾರಿಗೆ ಆಯುಕ್ತ ಕುಮಾರ್

ಉಬರ್ (Uber), ಓಲಾ (Ola) ಆಟೋಗಳು (Auto) ಇನ್ನು ಮುಂದೆ ಜಿಎಸ್ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ.

ಉಬರ್ (Uber), ಓಲಾ (Ola) ಆಟೋಗಳು (Auto) ಇನ್ನು ಮುಂದೆ ಜಿಎಸ್ಟಿ ಮತ್ತು ಆಟೋ ಬಾಡಿಕೆ ಸೇರಿ ಕಿ.ಮೀ. 30 ರೂ ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಉಬರ್, ಓಲಾ ಕಂಪನಿಗಳು ಒಪ್ಪಿಗೆ ನೀಡಿವೆ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ. ಹೆಚ್. ಎಮ್ ಕುಮಾರ್ ಹೇಳಿದ್ದಾರೆ. ಆಟೋ ಚಾಲಕರು ಸಲ್ಲಿಸುವ ಮನವಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಸಾರಿಗೆ ಇಲಾಖೆ ಸಚಿವರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಊಬರ್, ಓಲಾ ಆಟೋಗಳು ಗ್ರಾಹಕರಿಂದ ದುಪ್ಪಟ್ಟು ಹಣ ಪಡೆಯುತ್ತಿವೆ ಎಂದು ಆರ್ಟಿಓ ನೋಟಿಸ್ ಜಾರಿ ಮಾಡಿತ್ತು. ಈ ಸಂಬಂಧ ಇಂದು ಓಲಾ, ಉಬರ್, ಱಪಿಡೋ ಕಂಪನಿಗಳು ಸಾರಿಗೆ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಿದವು. ಸಭೆ ಬಳಿಕ ಮಾತನಾಡಿದ ಸಾರಿಗೆ ಇಲಾಖೆಯ ಆಯುಕ್ತ ಟಿ. ಹೆಚ್. ಎಮ್ ಕುಮಾರ್ 3 ವೀಲರ್ ಅಗ್ರೀಗೇಟ್ ರೂಲ್ಸ್ಗೆ ಅವಕಾಶ ಇಲ್ಲ. ಅವರಿಗೆ ಮನವರಿಕೆ ಮಾಡಿದ್ದೇವೆ. ಅಗ್ರಿಗೇಶನ್ ಮಾಡೋದಕ್ಕೆ ನಾಳೆ ಬೆಳಿಗ್ಗೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ :-  ರಾಯರ ದರ್ಶನ ಪಡೆದ ಸಿಎಂ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ


ರಾಜ್ಯ ಸರ್ಕಾರದಿಂದ ಬೈಕ್ ಟ್ಯಾಕ್ಸಿ ಅನುಮತಿ ಇಲ್ಲ. ನಡೆಸುತ್ತಿದ್ದರೇ ಅದು ಅಕ್ರಮ. ಟ್ಯಾಕ್ಸಿ ಅನುಮತಿ ಇಲ್ಲ. ನಾಳೆಯಿಂದ ಓಲಾ, ಊಬರ್ ಆಟೋಗಳು ಜಿಎಸ್ಟಿ ( GST ) ಸೇರಿ 30ರೂ ಪಡೆಯಬೇಕು. ನಿಗದಿಕ್ಕಿಂದ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಓಲಾ, ಉಬರ್ ಆಟೋ ಸೇವೆ ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಅನುಮತಿ ಕೇಳಲು ಸಾರಿಗೆ ಇಲಾಖೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಿದೆ. ನಿಗದಿ ಮಾಡಿದ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ಕೂಡ ಆಪ್ ಆಧಾರಿತ ಆಟೋ ಸೇವೆ ಪಡೆಯದಂತೆ ಸಾರಿಗೆ ಇಲಾಖೆ ಮನವಿ ಮಾಡಿಕೊಂಡಿದೆ. ಓಲಾ ಊಬರ್ ಹೆಚ್ಚಿನ ದರ ಪಡೆದರೆ ಆರ್ಟಿಓ ( RTO ) ಸಹಾಯವಾಣಿ ನಂಬರ್ 9449863429, 9449863426 ಸಾರ್ವಜನಿಕರು ಕರೆ ಮಾಡಬಹುದು. ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನ ಕೋರ್ಟ್ಗೂ ಸಲ್ಲಿಕೆ ಮಾಡಲಾಗುವುದು ಎಂದು ಕುಮಾರ್ ಹೇಳಿದರು.

ಇದನ್ನೂ ಓದಿ :- ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ತನಿಖೆ ಮನವಿಗೆ ಆಕ್ಷೇಪ – ಅಕ್ಟೋಬರ್ 14ಕ್ಕೆ ವಿಚಾರಣೆ ಮುಂದೂಡಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!