ಹಾಲು, ಮೊಸರು ಆಯ್ತು ಈಗ ತುಪ್ಪದ ಬಿಸಿ..!

ಗ್ರಾಹಕರಿಗೆ ಹಾಲು ( MILK ) ಮೊಸರಿನ ದರದ ಬಿಸಿ ತಟ್ಟಿದೆ. ಇದರ ಮಧ್ಯೆ KMF ಎಲ್ಲ ಇತರ ಉತ್ಪನ್ನಗಳ ದರವನ್ನೂ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಗ್ರಾಹಕರಿಗೆ ಹಾಲು ( MILK ) ಮೊಸರಿನ ದರದ ಬಿಸಿ ತಟ್ಟಿದೆ. ಇದರ ಮಧ್ಯೆ KMF ಎಲ್ಲ ಇತರ ಉತ್ಪನ್ನಗಳ ದರವನ್ನೂ ಏರಿಕೆ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಿದೆ. ಹಾಲು, ಮೊಸರಿನ ದರವನ್ನು ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದ್ದ KMF ಮತ್ತೆ ಗ್ರಾಹಕರಿಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ.

ದಸರಾ ಹಬ್ಬದಿಂದಲೂ ತುಪ್ಪದ ದರ ಹೆಚ್ಚಾಗುತ್ತಲೇ ಇದೆ. ಒಮ್ಮೆಗೆ ದರ ಏರಿಕೆ ಮಾಡದೇ ಕಳೆದ 2 ತಿಂಗಳಿನಲ್ಲಿ 4 ಬಾರಿ ಹಂತ-ಹಂತವಾಗಿ ತುಪ್ಪದ ದರ ಏರಿಕೆ ಮಾಡಿದೆ. ಸದ್ಯ ಒಟ್ಟು 170 ರೂ.ವರೆಗೆ ದರ ಹೆಚ್ಚಳ ಮಾಡಿದೆ. ಕೇವಲ ತುಪ್ಪ ಮಾತ್ರವಲ್ಲ ಇದೀಗ ಕೆಎಂಎಫ್ನ ಎಲ್ಲ ಉತ್ಪನ್ನಗಳ ದರವೂ ಶೇ.5 ರಿಂದ 15 ರಷ್ಟು ಏರಿಕೆ ಕಂಡಿದೆ. ಒಂದು ಕೆಜಿಗೆ ತುಪ್ಪದ ದರ 50 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಇದನ್ನೂ ಓದಿ : –  ತಾರಕಕ್ಕೇರಿದ ಗಡಿ ವಿವಾದ – ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದ ಸಿಎಂ ಏಕನಾಥ್ ಶಿಂಧೆ

ಈ ಮೊದಲು ಹಾಲು, ಮೊಸರು ದರ ಹೆಚ್ಚಳಕ್ಕೆ ಕೆಎಂಎಫ್ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಚುನಾವಣೆ ವರ್ಷ ದರ ಏರಿಕೆಗೆ ಸಿಎಂ ಒಪ್ಪಿರಲಿಲ್ಲ. ಇದರಿಂದಾಗಿ ಸೈಲೆಂಟಾಗಿಯೇ ತುಪ್ಪದ ದರ ಏರಿಕೆ ಮಾಡುತ್ತಿತ್ತು. ಅದೇ ರೀತಿ ಕೆಎಂಎಫ್ ತನ್ನ ಇತರೆ ಉತ್ಪನ್ನಗಳ ದರವನ್ನೂ ಹೆಚ್ಚಳ ಮಾಡಿದೆ. ಈ ಬಗ್ಗೆ KMF ಅಧ್ಯಕ್ಷರನ್ನು ಕೇಳಿದ್ರೆ ತುಪ್ಪದ ದರ ಹೆಚ್ಚಳ ಮಾಡಿದ್ದು ನಿಜ. ಇತರ ಉತ್ಪನ್ನಗಳ ದರವೂ ಜಾಸ್ತಿ ಮಾಡಿದ್ದೇವೆ. ತುಪ್ಪ, ಇತರ ಪ್ರಾಡಕ್ಟ್ ದರ ಹೆಚ್ಚು ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (BALACHANDRA JARAKI HOLI ) ತಿಳಿಸಿದ್ದಾರೆ.

ಇದನ್ನೂ ಓದಿ : –  ನೆಚ್ಚಿನ ಶಿಕ್ಷಕರನ್ನು ಎತ್ತಿನಗಾಡಿ ಮೂಲಕ ಊರಿನಲ್ಲಿ ಮೆರವಣಿಗೆ ಮಾಡಿಸಿದ ಮಕ್ಕಳು..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!