ಪೇ ಸಿಎಂ ಅಭಿಯಾನ ನಡೆಸಿ ಪೋಸ್ಟರ್ ಅಂಟಿಸಲು ಮುಂದಾದ ಕಾಂಗ್ರೆಸ್ ( congress ) ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪೇ ಸಿಎಂ ( paycm )ಪೋಸ್ಟರ್ ಅಂಟಿಸಲು ಮುಂದಾದರು.
ಪೋಸ್ಟರ್ ಕಸಿದುಕೊಂಡ ಪೊಲೀಸರು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
40% ಬಿರುದು ಕೊಟ್ಟಿದ್ದು ಗುತ್ತಿಗೆದಾರರು. ರಾಜ್ಯದ ಮಾನ ಮರ್ಯಾದೆ ತೆಗೆದಿದ್ದಾರೆ. ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿರೋದು ಎಂದು ಜನರಿಗೆ ಗೊತ್ತಿದೆ ಎಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೇಳಿದ್ದಾರೆ. ಬಿಜೆಪಿಯವರು ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ. 40% ಕಮಿಷನ್ ಚರ್ಚೆ ದೇಶದಲ್ಲಿ ನಡೆಯುತ್ತಿದೆ. 40% ತಡೆಯದೆ ಇದ್ದರೇ 60% ಕಮಿಷನ್ ಆಗುತ್ತಿತ್ತೋ ಏನು.. ಆರು ಕೋಟಿ ಜನರ ಮನಸ್ಸಿನಲ್ಲಿ 40% ಕಮಿಷನ್ ಎಂದು ಕುಳಿತಿದೆ. ಪೋಸ್ಟರ್ ಏನು ಕಿತ್ತು ಹಾಕುತ್ತೀರಾ.. ಜನರ ಮನಸ್ಸಿನಲ್ಲಿ ಇರುವುದನ್ನು ಹೇಗೆ ತೊಳೆಯುತ್ತಿರಾ..? ಆಸಿಡ್ ಹಾಕಿ ತೊಳೆಯುತ್ತೀರಾ..? ಅರೆಸ್ಟ್ ಆದರೂ ಮಾಡಲಿ, ಏನಾದರೂ ಮಾಡಲಿ ನಾವು ಹೆದರುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ :- 40% ಕಮಿಷನ್ ಬಗ್ಗೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡಿ – ಸಿಎಂ ಬೊಮ್ಮಾಯಿ ತಿರುಗೇಟು
ನಮ್ಮನ್ನೂ ಜೈಲಿಗೆ ಹಾಕಲಿ. ಬಿಜೆಪಿ ( bjp )ಯವರಿಗೆ ಇದು ಹೊಸದಲ್ಲ. ನಿನ್ನೆಯೂ ನಮ್ಮ ಕಾರ್ಯಕರ್ತರ ಬಂಧನ ಆಗಿದೆ ಎಂದು ಕಾಂಗ್ರೆಸ್ ಭವನದಲ್ಲಿ ವಿರೋಧ ನಾಯಕ ಹರಿಪ್ರಸಾದ್ ಹೇಳಿದ್ರು. ಸಿಎಂಗೆ ತಾಕತ್,ಧಮ್ಮು ಇದ್ರೆ ನಮ್ಮನ್ನ ಬಂಧಿಸಲಿ. ಲಿಂಗಾಯತ ಧರ್ಮದ ಹೆಸರು ಹೇಳಿ ಅಪಮಾನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನು ಓದಿ :- ಬಿಜೆಪಿಯವರು ನೆಪ ಹೇಳೋ ಬದಲು PFI ನಿಷೇಧಿಸಲಿ – ದಿನೇಶ್ ಗುಂಡೂರಾವ್
ಕಾಂಗ್ರೆಸ್ ( congress) ಹೋರಾಟಕ್ಕೆ ಇತಿಹಾಸ ಇದೆ . ಇಂತಹ ಪಕ್ಷಕ್ಕೆ ಭಯ ಯಾಕೆ..? ಎಂದು ಮಾಜಿ ಸಚಿವ ಕೆ ಜೆ ಜಾರ್ಜ್ ಹೇಳಿದ್ರು. ನಾವು ಫೋಸ್ಟರ್ ಅಂಟಿಸುತ್ತೇವೆ. ಸರ್ಕಾರದ ಕ್ರಮಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದ್ರು. ಇನ್ನೂ ಬಿ.ಕೆ ಹರಿಪ್ರಸಾದ್ ಪೇ ಸಿಎಂ ಪೊಸ್ಟ್ ನ್ನು ಬಿ.ಎಂಟಿ.ಸಿ ಬಸ್ ಗೆ ಅಂಟಿಸಿದ್ದಾರೆ. ಲಂಚ ಬಿಜೆಪಿ ಸರ್ಕಾರ ಎಂದು ಕೈ ಕಾರ್ಯಕರ್ತರು ಘೊಷಣೆ ಕೂಗಿದ್ರು.
ಕಾಂಗ್ರೆಸ್ ನಿಂದ ಪೇ ಸಿಎಂ ಫೋಸ್ಟರ್ ಅಂಟಿಸುವ ಅಭಿಯಾನ ಹಿನ್ನೆಲೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸಕ್ಕೆ ಹೆಚ್ಚು ಭದ್ರತೆ ನೀಡಲಾಗಿದೆ.
ಇದನ್ನು ಓದಿ :- ನೀವು ವಿರೋಧ ಪಕ್ಷದಲ್ಲಿ ಇದ್ದಾಗ ಕಡುಬು ತಿಂತಿದ್ದೀರಾ? – ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು