ಬೆಸ್ಕಾಂ ( bescom ) ಸಿಬ್ಬಂದಿ ಶೀಟ್ ಮನೆ ಮಾಲೀಕನಿಗೆ ವಿದ್ಯುತ್ ಬಿಲ್ ನೀಡಿ ಹೋಗಿದ್ದಾರೆ. ಅದರಂತೆ ಬಿಲ್ ತೆರೆದು ನೋಡಿದ ಮನೆಯ ಮಾಲೀಕ ರಾಜು ಕಂಗಾಲಾಗಿದ್ದಾರೆ.
ಏಕೆಂದರೆ ಅದರಲ್ಲಿ ನಮೂದಾಗಿದ್ದ ವಿದ್ಯುತ್ ಬಿಲ್ ಮೊತ್ತ ಒಟ್ಟು 23,000 ರೂಪಾಯಿ ಆಗಿತ್ತು. ಬನ್ನೇರುಘಟ್ಟ ರೋಡ್ ದೊಡ್ಡ ಕಮ್ಮನಹಳ್ಳಿ ಬಿಬಿಎಂಪಿ 15th ಕ್ರಾಸ್ ನಲ್ಲಿರುವ ಕಾರ್ಮಿಕ ರಾಜು ಅವರ ಶೀಟ್ ಮನೆಗೆ ಈ ಹಿಂದೆ 219, 241, 265 ರೂ. ವಿದ್ಯುತ್ ಬಿಲ್ ಬರುತ್ತಿತ್ತು. ಇದನ್ನೂ ಓದಿ : – ಕನ್ನಡದ ನಿರ್ದೇಶಕ, ನಟ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ
ಆದರೆ ಬಿಲ್ ಮೊತ್ತದಲ್ಲಿ ದಿಢೀರ್ ಏರಿಕೆಯಾಗಿರುವುದನ್ನು ಕಂಡು ರಾಜು ಶಾಕ್ ಆಗಿದ್ದಾರೆ. ಫೆಬ್ರವರಿ 2022 ರಲ್ಲಿ 219 ರೂ. ಬಿಲ್ ಬಂದಿತ್ತು. ಮಾರ್ಚ್ ತಿಂಗಳಲ್ಲಿ 241 ರೂಪಾಯಿ, ಜೂನ್ ನಲ್ಲಿ 265 ರೂ., ಜುಲೈನಲ್ಲಿ 419 ರೂ., ಆಗಸ್ಟ್ ತಿಂಗಳಲ್ಲಿ 348 ರೂ. ಬಿಲ್ ಬಂದಿದೆ. ಆದರೆ ಸೆಪ್ಟೆಂಬರ್ ತಿಂಗಳಿಗೆ ಬೆಸ್ಕಾಂ ಸಿಬ್ಬಂದಿ ಬಂದು 22 ಸಾವಿರ ರೂಪಾಯಿ ಕರೆಂಟ್ ಬಿಲ್ ನೀಡಿದ್ದಾರೆ. ಅಕ್ಟೋಬರ್ ತಿಂಗಳಿನದ್ದು ಎಂದು ಹೇಳಿ ಮತ್ತೆ 500 ರೂ. ಸೇರಿಸಿ 23 ಸಾವಿರ ಕಟ್ಟುವಂತೆ ಬಿಲ್ ನೀಡಿದ್ದಾರೆ.
ಇದರಿಂದ ಬೇಸತ್ತ ರಾಜು ಬೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ. ತಪ್ಪಾಗಿ ಬಿಲ್ ಕೊಟ್ಟಿರುವುದಲ್ಲದೆ ಪೂರ್ತಿ ಹಣ ನೀಡುವಂತೆ ರಾಜುಗೆ ಒತ್ತಾಯಿಸಲಾಗಿದೆ. ಅಲ್ಲದೆ ಪೂರ್ತಿ ಕರೆಂಟ್ ಬಿಲ್ ಹಣ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಸಿಬ್ಬಂದಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ : – ಕೇಬಲ್ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆ