ಎಸ್ಸಿ, ಎಸ್ಟಿ ಮೀಸಲಾತಿ (SC, ST) ಪ್ರಮಾಣ ಹೆಚ್ಚಳ ಕುರಿತಂತೆ ಸರ್ವಪಕ್ಷ ಸಭೆ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿಲಾಗಿದೆ. ನ್ಯಾ.ನಾಗಮೋಹನ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ( madhuswamy ) ಸ್ಪಷ್ಟಪಡಿಸಿದ್ದಾರೆ.
ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣ 15ರಿಂದ 17ಕ್ಕೆ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ 3-7ಕ್ಕೆ ಹೆಚ್ಚಳ ಮಾಡಲು ಸರ್ಕಾರ ಕೂಡಲೇ ಆದೇಶದ ಮೂಲಕ ಜಾರಿ ಮಾಡುತ್ತೇವೆ ಎಂದು ಹೇಳಿದರು. ಒಳ ಮೀಸಲಾತಿ ಬಗ್ಗೆ ಸದಾಶಿವ ಆಯೋಗದ ವರದಿ ಅಧ್ಯಯನ ಮಾಡಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಮುಂದೆ ಓಬಿಸಿ ( OBC ) ಹಾಗೂ ಎಸ್ ಟಿ ಸೇರಿಸ ಬೇಕು ಎಂಬ ಬೇರೆ ಬೇರೆ ಸಮುದಾಯದ ಬೇಡಿಕೆಯನ್ನ ಚರ್ಚೆ ಮಾಡುತ್ತೇವೆ. ನಮ್ಮ ಮುಂದೆ ಬೇರೆ ಬೇರೆ ಮಾರ್ಗಗಳಿವೆ. ಶೆಡ್ಯೂಲ್ 9 ರ ಅಡಿ ಮೀಸಲಾತಿ ತರಬೇಕಾ ಎಂಬ ಚರ್ಚೆ ನಡೆದಿದೆ. ಈಗಾಗಲೇ ತಮಿಳುನಾಡಲ್ಲಿ ಶೇಕಡಾ 69 ಮೀಸಲಾತಿ ಇದೆ. ಸಿಎಂ ಬೇರೆ ಸಮುದಾಯಗಳ ಬಗ್ಗೆ ವೈಜ್ಙಾನಿಕ ವರದಿ ಬಗ್ಗೆ ನನ್ನ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ. ನಾಗಮೋಹನ್ ದಾಸ್ ವರದಿಯಲ್ಲೇ ಸದಾಶಿವ ಆಯೋಗದಂತೆ ಒಳ ಮೀಸಲಾತಿ ಜಾರಿ ಮಾಡಿ ಅಂತಾ ಹೇಳಿದ್ದಾರೆ. ಈಗ ನಾವು ನಾಗಮೋಹನ್ ದಾಸ್ ವರದಿ ಮೂಲಕ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ :- ತುಮಕೂರಿನಲ್ಲಿ ಪಾದಯಾತ್ರೆ ನಡುವೆ ರಾಹುಲ್ ಗಾಂಧಿ ಸುದ್ದಿಗೋಷ್ಟಿ…