ಹನುಮ ಜಯಂತಿ ( HANUMA JAYANTHI ) ಪ್ರಯುಕ್ತ ಶೋಭಾ ಯಾತ್ರೆ ಮೆರವಣಿಗೆ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಜೆ ನಗರ ವ್ಯಾಪ್ತಿಯಲ್ಲಿ ಪೊಲೀಸ್ಬಿ ಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜೆಜೆ ನಗರ ( J.J NAGARA ) ಮುಖ್ಯರಸ್ತೆಯಿಂದ ರ್ಯಾಲಿ ಹೊರಡಲಿದೆ. ರಾಮೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಶೋಭಾಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ. ಆ ಕಾರಣಕ್ಕೆ ಅನುಮತಿಯಿಲ್ಲದೆ ಶೋಭಾಯಾತ್ರೆ ಮಾಡೋದಾಗಿ ರಾಮೋತ್ಸವ ಸಮಿತಿ ಹೇಳಿದೆ. ರಾಮೋತ್ಸವಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇದನ್ನೂ ಓದಿ : – ಆಟದ ಮೈದಾನ ವಿಚಾರ – ಶಾಸಕ ರವಿ ಸುಬ್ರಮಣ್ಯ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಪಶ್ಚಿಮವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ 11 ಸೆಕ್ಟರ್ ಗಳಲ್ಲಿ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಎಸಿಪಿ 5, ಇನ್ಸ್ ಪೆಕ್ಟರ್27 ,ಪಿಎಸ್ ಐ 67, ಎಎಸ್ ಐ 43, ಎಚ್ ಸಿ-ಪಿಸಿ 605.ಹೋಂಗಾರ್ಡ್ 779 ಸಿಬ್ಬಂದಿ ಭದ್ರತೆಯಲ್ಲಿ ಭಾಗಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶೋಭಾ ಯಾತ್ರೆ ಮಾಡೋದಾಗಿ ರಾಮೋತ್ಸವ ಸಮಿತಿ ಸ್ಪಷ್ಟಪಡಿಸಿದೆ. ಕೆ.ಆರ್ ಟೆಂಪಲ್ ನಿಂದ ವಿವಿಪುರಂ ಪಾಂಡುರಂಗ ದೇವಸ್ಥಾನದ ವರೆಗೆ ಶೋಭಾಯಾತ್ರೆ ನಡೆಯಲಿದೆ.
ಇದನ್ನೂ ಓದಿ : – ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ – ಪೊಲೀಸ್ ಬೀಗಿ ಬಂದೋಬಸ್ತ್