ಬೆಂಗಳೂರಿ ( BANGALROE ) ನ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ನಡೆಸಿದ ಶಿಕ್ಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ಬ್ಯಾಗ್ ನಲ್ಲಿ ಪತ್ತೆಯಾದ ವಸ್ತುಗಳನ್ನು ಕಂಡು ಶಿಕ್ಷಕರು ಈ ವಿಷಯವನ್ನ ಶಾಲಾ ಅಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಮಕ್ಕಳ ನಡವಳಿಕೆ ಮೇಲೆ ನಿಗಾ ಇರಿಸುವಂತೆ ಸಲಹೆ ನೀಡಿದೆ. ಇದರ ಜೊತೆಗೆ ಮಕ್ಕಳ ಬ್ಯಾಗ್ ಗಳನ್ನು ಪರಿಶೀಲನೆ ಮತ್ತು ಅವರ ಶಾಲಾ ಹಾಜರಾತಿ ಬಗ್ಗೆಯೂ ಗಮನ ನೀಡುವಂತೆ ಸೂಚನೆ ನೀಡಿದೆ. ಅದರಲ್ಲಿಯೂ 9 ಮತ್ತು 10ನೇ ತರಗತಿ ಮಕ್ಕಳ ಬ್ಯಾಗ್ ಗಳಲ್ಲಿ ಈ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : – ಟೊಯೋಟ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ – ಸಂತಾಪ ಸೂಚಿಸಿದ ಸಿಎಂ
ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿವೆಯಂತೆ. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : – ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಜೊತೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ …!