PFI ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ( b.k hariprasad ) ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ PFI ಬ್ಯಾನ್ ಚರ್ಚೆ ಹೊಸದಲ್ಲ. ಗುಜರಾತ್ ( gujurath ) ನಲ್ಲಿ ಚುನಾವಣೆ ಸಂದರ್ಭದಲ್ಲಿ ಮೆಸೇಜ್ ಬರುತ್ತೆ. ಮೋದಿ ಹತ್ಯೆ ಬಗ್ಗೆ ಸುದ್ದಿಯಾಗುತ್ತೆ.
ಈ ಸಂದರ್ಭದಲ್ಲಿ ಸಂಘಟನೆ ಬ್ಯಾನ್ ಆಗುತ್ತೆ. ಇಲ್ಲ ಫೇಕ್ ಎನ್ ಕೌಂಟರ್ ಆಗುತ್ತೆ. 8 ವರ್ಷ ಬಿಜೆಪಿ ಸರ್ಕಾರ ಏನ್ ಮಾಡ್ತಾ ಇದೆ. ಅವಾಗಲೇ ಬ್ಯಾನ್ ಮಾಡಬೇಕಿತ್ತು. ಎಲ್ಲ ತರಹದ ಭಯೋತ್ಪಾದಕ ಸಂಘಟನೆ ಬ್ಯಾನ್ ಆಗಬೇಕು. ಆದ್ರೆ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಈ ನಾಟಕ ಕಂಪನಿ ಕೆಲಸ ಮಾಡುತ್ತೆ. ಇದು ಹೊಸದಲ್ಲ, ನಾನು ಹಿಂದೆ ಕೂಡ ಹೇಳಿದ್ದೆ. ಚುನಾವಣೆ ಮುಗಿದ ಮೇಲೆ ಏನಾಗುತ್ತೆ ಅಂತ ಗೊತ್ತು. ಇದೊಂದು ಚುನಾವಣೆ ಗಿಮಿಕ್ ಎಂದು ಹೇಳಿದ್ರು.
ಇದನ್ನೂ ಓದಿ : – ನಿಮಗೆ ತಾಕತ್ತು ದಮ್ಮು ಇದ್ದರೆ ನಿಮ್ಮ ಪಕ್ಷದ ಶಾಸಕರನ್ನು ನಿಮ್ಮ ಪಕ್ಷದಲ್ಲಿ ಇಟ್ಟುಕೊಳ್ಳಿ – ಲಕ್ಷಣ್ ಸವದಿ