ಈದ್ಗಾ ಮೈದಾನದಲ್ಲಿ ವಿಶ್ವ ಯೋಗ ದಿನಾಚರಣೆ – ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡೋದಕ್ಕೆ ಅಗಲ್ಲ ಎಂದ BBMP

ಈದ್ಗಾ ಮೈದಾನದಲ್ಲಿ ವಿಶ್ವ ಯೋಗಾ ದಿನ (INTERNATIONAL YOGA DAY ) ಆಚರಿಸಲು ಅನುಮತಿ ನೀಡುವಂತೆ ಬಿಬಿಎಂಪಿ (BBMP) ಗೆ ಹಿಂದೂಪರ ಸಂಘಟನೆಗಳು ಈ ಹಿಂದೆ ಮನವಿ ಸಲ್ಲಿಸಿದ್ದವು. ಆದರೆ ಸದ್ಯದ ಪರಿಸ್ಥಿತಿ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಯೋಗ ದಿನ ಆಚರಣೆಗೆ ಪರ್ಮಿಷನ್ ಸಿಗುವುದು ಅನುಮಾನವಾಗಿದೆ.

ಈ ವಿಚಾರದಲ್ಲಿ ಬಿಬಿಎಂಪಿ ಮತ್ತೆ ನಿರಾಸೆ ಮೂಡಿಸಿದೆ. ಈದ್ಗಾ (EDIGA) ಮೈದಾನದಲ್ಲಿ ಯೋಗ ದಿನಾಚರಣೆಗೆ ಪರ್ಮಿಷನ್ ಗೆ ನೋ ಎಂದಿದ್ದ ಬಿಬಿಎಂಪಿ ನೀಡಿದ್ದ ನೋಟಿಸ್ ಗೆ ವರ್ಕ್ ಬೋರ್ಡ್ ಇಂದ ದಾಖಲೆ ಸಲ್ಲಿಕೆ ಮಾಡಲಾಗಿದೆ. ಸಲ್ಲಿಕೆಯಾದ ದಾಖಲೆಯನ್ನು ಬಿಬಿಎಂಪಿಯ ಕಾನೂನು ವಿಭಾಗಕ್ಕೆ ರವಾನಿಸಿದ್ದು, ಕಾನೂನು ಇಲಾಖೆಯಿಂದ ವರದಿ ಪರಿಶೀಲಿಸಿ ಬರಲು ಇನ್ನೂ ಒಂದು ವಾರ ಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡೋದಕ್ಕೆ ಆಗಲ್ಲ. ಕಾನೂನು ಇಲಾಖೆ ಹಾಗೂ ಪೊಲೀಸ್ ಇಲಾಖೆ ವರದಿ ಬರುವವರೆಗೆ ಮೈದಾನದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಸದ್ಯ ಯೋಗ ದಿನಾಚರಣೆಗೆ ಅನುಮತಿ ನೀಡದ ಕಾರಣ ಸಂಘಟನೆಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದೆ.

 ಇದನ್ನೂ ಓದಿ : – BBMP ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ – ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!