ಆನೆ ಮರಿಯೊಂದು ದಾರಿ ತಪ್ಪಿ ಕಾಡನ್ನು ಬಿಟ್ಟು ನಾಡಿಗೆ ಬಂದ ಘಟನೆ ಚಾಮರಾಜನಗರ ( chamarajnagara ) ಜಿಲ್ಲೆಯ ಯಳಂದೂರು ತಾಲೂಕಿನ ಬಿ.ಆರ್.ಟಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬಿ.ಆರ್.ಟಿ ಅರಣ್ಯ ಪ್ರದೇಶದ ಪುರಾಣಿ ಪೋಡಿನ ವಸತಿ ಶಾಲೆಯಲ್ಲಿ ಮಕ್ಕಳು ಆಟವಾಡುತ್ತಿರುವಾಗ ಆನೆ ಮರಿ ಕೂಡ ಮಕ್ಕಳೊಂದಿಗೆ ಆಟವಾಡಿದೆ.
ಶಾಲೆ ಆವರಣದೊಳಗೆ ಬಂದ ಆನೆ ಮರಿಗೆ ಪೊಡಿನ ಜನರು ಹಾಲು, ಹಣ್ಣು ಕೊಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಬಂದು ಮರಿ ಆನೆ ಸಂರಕ್ಷಿಸಿ ,ತಾಯಿ ಆನೆ ಜೊತೆ ಸೇರಿಸಿದ್ದಾರೆ.
ಇದನ್ನೂ ಓದಿ : – ಸಿ.ಟಿ ರವಿ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ