ಚಿಕ್ಕಬಳ್ಳಾಪುರದ (Chikkaballapura) ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಪಿಎಂಸಿ ಟೊಮ್ಯಾಟೊ ಮಾರ್ಕೆಟ್ (APMC tomato market) ಕೆಸರು ಗದ್ದೆಯಾಗಿದೆ. ಎಪಿಎಂಸಿ ಮಾರುಕಟ್ಟೆ ಅವ್ಯವಸ್ಥೆಗಳ ಆಗರವಾಗಿದೆ.
ಚಿಂತಾಮಣಿಗೆ (Chintamani) ವಾಣಿಜ್ಯನಗರ ಎಂಬ ಖ್ಯಾತಿ ಬರಲು ಎಪಿಎಂಸಿ ಮಾರುಕಟ್ಟೆಯೆ ಕಾರಣ. ಸಾಂಕ್ರಾಮಿಕ ರೋಗಗಳಿಗೆ ಮಾರುಕಟ್ಟೆ ಹಾಟ್ ಸ್ಪಾಟ್ ಆಗಿದೆ. ಪ್ರತಿದಿನ ಕೋಟಿಗಟ್ಟಲೆ ವ್ಯಾಪಾರಕ್ಕೆ ಮಾರ್ಕೆಟ್ ಫೇಮಸ್ ಆಗಿತ್ತು. ಎಪಿಎಂಸಿ ಅಧಿಕಾರಿಗಳು ಕೇವಲ ಕಮಿಷನ್ ಗೆ ಮಾತ್ರ ಸೀಮಿತವಾಗಿದ್ದಾರೆ.
ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುವ ಚರಂಡಿಗಳನ್ನು ಸಿಬ್ಬಂದಿ ಸ್ವಚ್ಛಗೊಳಿಸಿಲ್ಲ. ಪ್ರತಿದಿನ ಸೊಳ್ಳೆಗಳ ಕಾಟಕ್ಕೆ ರೈತರು ಹೈರಾಣಾಗುತ್ತಿದ್ದಾರೆ. ಇದನ್ನೂ ಓದಿ : – ರಾಜ್ಯಾದ್ಯಂತ ಮುಂದಿನ 4 ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ