ಕಾಫಿ ನಾಡು ಚಿಕ್ಕಮಗಳೂರು ( CHIKKAMAGALURU ) ಜಿಲ್ಲೆಯಲ್ಲಿ ಲವ್ ಜಿಹಾದ್ ಪಿತೂರಿ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸಹೋದರಿಯ ಫೋಟೋ ಹಾಕಿದ ಆರೋಪಕ್ಕೆ ಸಂಬಂಧಿಸಿ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ರೋಫ್ ಎಂಬುವನ ವಿರುದ್ಧ FIR ದಾಖಲಾಗಿದೆ.
ಯುವತಿಯ ಅಣ್ಣನ ದೂರಿನ ಮೇರೆಗೆ ಮೊಹಮ್ಮದ್ ರೋಫ್, ಇನ್ಸ್ ಪೆಕ್ಟರ್ ಜಾಕೀರ್ ಹುಸೇನ್ ವಿರುದ್ಧವೂ ದೂರು ದಾಖಲಾಗಿದೆ. ತನ್ನ ಸಹೋದರಿಯ ಫೋಟೋವನ್ನು ಸೋಶಿಯಲ್ ಮೀಡಿಯಾ ( SOCIAL MEDIA ) ಗೆ ಹಾಕಿದಕ್ಕೆ ಲವ್ ಜಿಹಾದ್ ಪಿತೂರಿ ಎಂದು ಯುವತಿಯ ಅಣ್ಣ ದೂರು ದಾಖಲಿಸಿದ್ದಾರೆ. ಹಾಗೂ ದೂರಿ ನೀಡಿದರು ಕ್ರಮ ಕೈಗೊಂಡಿಲ್ಲವೆಂದು ಸೆನ್ ಇನ್ಸೆಪೆಕ್ಟರ್ ಜಾಕೀರ್ ಹುಸೇನ್ ಮೇಲೆಯೂ ದೂರು ದಾಖಲಿಸಿದ್ದಾರೆ. ಹಾಗೂ ಯುವತಿಯ ಸಹೋದರ ಎಸ್ಪಿಗೂ ಲಿಖಿತ ದೂರು ನೀಡಿದ್ದಾರೆ.
ಇದನ್ನೂ ಓದಿ : – ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿದ ಆರೋಪ – ಚುನಾವಣಾ ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್