ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹುಟ್ಟೂರು ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರಹಳ್ಳಿ ಗ್ರಾಮದಲ್ಲೂ ಮುಸ್ಲಿಂ ಬ್ಯಾನ್ ಕೂಗು ಜೋರಾಗಿದೆ.
ಭಾನುವಾರದಿಂದ ಆರಂಭವಾದ ದೇವೀರಮ್ಮನ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ಜಾತ್ರೆ ಇನ್ನೊಂದು ವಾರಗಳ ಕಾಲ ನಡೆಯಲಿದೆ. ಗುರುವಾರ ಜಾತ್ರೆ ನಡೆಯಲಿದ್ದು, ಈ ಬಾರಿಯ ಸುಗ್ಗಿ ಹಬ್ಬಕ್ಕೆ ಮುಸ್ಲಿಮರಿಗೆ ನಮ್ಮ ಊರಿನಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲವೆಂದು ಹಳ್ಳಿಯ ದ್ವಾರದ ಬಾಗಿಲಿನಲ್ಲೇ ಬ್ಯಾನರ್ ಹಾಕಿದ್ದಾರೆ.
ಈ ದೇಶದ ಕಾನೂನನ್ನು ಗೌರವಿಸದ, ನಾವು ಪೂಜಿಸುವ ಗೋವುಗಳನ್ನ ಕಡಿದು ಕೊಲ್ಲುವ ಹಾಗೂ ದೇಶದ ಅಖಂಡತೆಗೆ ಸವಾಲು ಎಸೆಯುವ ಮುಸ್ಲಿಂ ಗೋ ಕಟುಕರ ಜೊತೆ ನಾವು ವ್ಯವಹರಿಸುವುದಿಲ್ಲ. ಅವರನ್ನು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಊರಿನ ಮುಂದೆಯೇ ದೊಡ್ಡ ಬೋರ್ಡ್ ಹಾಕಿದ್ದಾರೆ.
ಇದನ್ನು ಓದಿ :- ರಾಜ್ಯದಲ್ಲಿರೋದು ರಿಮೋಟ್ ಸರ್ಕಾರ – ಸಿಎಂ ಬೊಮ್ಮಾಯಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ