ಸರ್ವ ಜನಾಂಗದ ಚಿಂತಕ, ಕಾಂಗ್ರೆಸ್ ( congress ) ಮುಖಂಡ ರಾಹುಲ್ ಗಾಂಧಿ ( rahul gandhi
) ಭಾರತ್ ಜೋಡೋ ಯಾತ್ರೆ ನಡುವೆ ಬಂಜಾರ ( banjara ) ಜನಾಂಗದ ಕಷ್ಟಗಳನ್ನ ಆಲಿಸಿದ್ರು. ಬಂಜಾರ ಮಹಿಳೆಯರು ಕೆಲಸಕ್ಕಾಗಿ ಗುಳೇ ಹೋಗೋದು ಸಾಮಾನ್ಯವಾಗಿದೆ. ಹೀಗಾಗಿ ಬಂಜಾರ ಮಹಿಳೆಯರ ಸಂಕಷ್ಟಗಳನ್ನ ಆಲಿಸಿದ್ರು.
ಈ ವೇಳೆ ಬಂಜಾರ ಸಮುದಾಯದವರು ಇವರ ಭೂಮಿ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗದೆ ಉಳಿದಿರುವುದು. ನಿರುದ್ಯೋಗದ ಸಮಸ್ಯೆ , ವಸತಿ ಸಮಸ್ಯೆ, ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ :- ಶುಶೃತಿ ಸಹಕಾರಿ ಬ್ಯಾಂಕ್ ನಿಂದ ವಂಚನೆ ಪ್ರಕರಣ – ಬೆಂಗಳೂರಿನ 14 ಕಡೆ CCB ದಾಳಿ
ಸಂವಾದದಲ್ಲಿ ಭಾಗಿಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಾಂತಾ ನಾಯಕ್ ಮಹಿಳೆಯರ ಮಾತನ್ನು ಅನುವಾದ ಮಾಡಿದರು . ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ ಶಿವಕುಮಾರ್ ಸಂವಾದದಲ್ಲಿ ಮಾತನಾಡಿ ಸಮಾಜದ ಸ್ಥಿತಿಗತಿಯನ್ನು ತಿಳಿಸಿದರು .MLC ಶ್ರೀ ಪ್ರಕಾಶ ರಾಥೋಡ್, ಬಾಲರಾಜ ನಾಯಕ ಮಾತನಾಡಿದ್ರು. Dr ರಾಮನಾಯಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ :- ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಹಾಕಿದ ಸವಾಲು ಏನು ಗೊತ್ತಾ…?