ರಾಜ್ಯದಲ್ಲಿ ಈಡಿಗರು 70 ಲಕ್ಷ ಸಂಖ್ಯೆಯಲ್ಲಿದ್ದರು ಈ ಸಮುದಾಯವನ್ನು ಕಡೆಗಣನೆ ಮಾಡುತ್ತಿದ್ದಾರೆ. ಸೇಂದಿ ಕುರಿತ ಸಿಟಿ ರವಿ (CT Ravi) ಹೇಳಿಕೆ ಖಂಡನೀಯ ಅವರು ವಿಷಾದ ವ್ಯಕ್ತಪಡಿಸಬೇಕು ಎಂದು ಕೋಲಾರ (Kolar) ದಲ್ಲಿ ಪ್ರಣವಾನಂದ ಸ್ವಾಮೀಜಿ (Pranavananda swamiji) ಹೇಳಿದ್ದಾರೆ.
ಸಮುದಾಯದ ಬಗ್ಗೆ ಲಘುವಾದ ಹೇಳಿಕೆಯನ್ನ, ಈಡಿಗ ಬಿಲ್ಲವ ಸಮಾಜ ಸಹಿಸುವುದಿಲ್ಲ. ಈಡಿಗ ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ಹಣ ಮೀಸಲಿಡಿ. 2A ಮೀಸಲಾತಿಗಾಗಿ ದೊಡ್ಡ ಸಮಾಜ ಪ್ರತಿಭಟನೆ ನಡೆಸ್ತಿದೆ. ಅದರಿಂದ ನಮ್ಮ ಸಮಾಜಕ್ಕೆ ತೊಂದರೆಯಾಗಲಿದೆ. ಈಡಿಗ ಸಮಾಜಕ್ಕೆ ಎಸ್ಟಿ ಮೀಸಲಾತಿ (Reservation) ಕೊಡಲೇಬೇಕು. ಈ ಬಗ್ಗೆ ಸರ್ಕಾರ ಕುಲಶಾಸ್ತ್ರ ಅಧ್ಯಯನ ನಡೆಸಬೇಕು. ಮೀಸಲಾತಿಗಾಗಿ ಜ.6 ರಂದು ಮಂಗಳೂರಿನಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. 40 ದಿನಗಳ ಕಾಲ 658 ಕಿ.ಮೀ ಪಾದಯಾತ್ರೆ ನಡೆಯಲಿದೆ. ಸಮುದಾಯದ ಬೇಡಿಕೆ ಈಡೇರದೇ ಹೋದಲ್ಲಿ ಬುದ್ದಿ ಕಲಿಸಬೇಕಾಗುತ್ತದೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಇದನ್ನು ಓದಿ :- ಶಿಗ್ಗಾಂವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ
ಸಚಿವ ಸುನಿಲ್ ಕುಮಾರ್ (Sunil kumar) , ಕೋಟಾ ಶ್ರೀನಿವಾಸ್ ಪೂಜಾರಿ ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗಲಿ. ಸಿಎಂ ಬಸವರಾಜ್ ಬೊಮ್ಮಾಯಿ (Basavaraj bommai) ಕುತಂತ್ರ ರಾಜಕಾರಣಿ. BSY ಕೂಡ ವಚನಭ್ರಷ್ಟರು. ST ಮೀಸಲಾತಿಗೆ ಸಿಎಂ ಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಸ್ವಾಮೀಜಿ ಗಳು ಅವರ ಸಮಾಜದ ಪರ ಹೋರಾಟ ಮಾಡ್ತಿದ್ದಾರೆ. ಸಿಗಂದೂರು ಚೌಡೇಶ್ವರಿ ದೇಗುಲದ ವಿರುದ್ದ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ರು.
ಇದನ್ನು ಓದಿ :- ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆಕ್ಟಿವ್….!