ಮಾಂಡೌಸ್ ಚಂಡಮಾರುತ (Mandous cyclone) ಎಫೆಕ್ಟ್ ನಿಂದ ವಿಜಯನಗರ (Vijayanagara) ದಲ್ಲಿ ಮೆಣಸಿನಕಾಯಿ ಬೆಳೆಗಾರರು ಹೈರಾಣಾಗಿದ್ದಾರೆ. ಕೈಗೆ, ಬಂದ ತುತ್ತು ಬಾಯಿಗೆ ಬಾರದ ಹಾಗಿದೆ ರೈತರ ಸ್ಥಿತಿ. ಬಿಟ್ಟು- ಬಿಡದೇ ಮಳೆರಾಯ ಸುರಿಯುತ್ತಿದ್ದಾನೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ನೀರು ಪಾಲಾಗಿದೆ. ಜಿಲ್ಲೆಯಲ್ಲಿ 1500 ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ಕೊಯ್ದಿರೋ ಮೆಣಸಿನಕಾಯಿ ಬೆಳೆ ಒಣಗಿಸಲು ವರುಣ ದೇವ ಬಿಡುತ್ತಿಲ್ಲ. ಕೊಳೆಯುವ ಹಂತಕ್ಕೆ ಮೆಣಸಿನಕಾಯಿ ಬೆಳೆ ತಲುಪುತ್ತಿವೆ.
ಇದನ್ನು ಓದಿ : – ತುಮಕೂರಿನಲ್ಲಿ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರು ದುರ್ಮರಣ