ದಾವಣಗೆರೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ – ಸಿದ್ದರಾಮಯ್ಯ ಹುಟ್ಟುಹಬ್ಬದಂದು ಅವರ ಬಗ್ಗೆ ಸ್ನೇಹಿತರು, ಸಹೋದ್ಯೋಗಿಗಳು ಹೇಳಿದ್ದೇನು ಗೊತ್ತಾ..?

ದಾವಣಗೆರೆ( DAVANAGERE ) ಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( SIDDARAMAIAH ) ನವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಆಚರಿಸಲು ಇಡೀ ಕರ್ನಾಟಕವೇ ದಾವಣಗೆರೆಯಲ್ಲಿ ನೆರೆದಿತ್ತು. ಸಿದ್ದರಾಮೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. 5 ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮೀರಿ ಅಭಿಮಾನಿಗಳು ಬಂದಿದ್ದು, ಕುರ್ಚಿಗಳು ಸಿಗದೇ ಸಹಸ್ರಾರು ಜನ ನಿಂತಿದ್ದರು. ಆಯೋಜನಕರ ಸಂಖ್ಯಾ ಲೆಕ್ಕಾಚಾರ ಮೀರಿ ಜನ ಬಂದಿದ್ದು, ಸುಮಾರು 7 ಲಕ್ಷ ಜನಕ್ಕೂ ಹೆಚ್ಚು ಬಂದಿರಬಹುದು ಎಂದು ಹೇಳಲಾಗುತ್ತಿದೆ.

‘ವಂದೇಮಾತರಂ’ ಹಾಡುವ ಮೂಲಕ ಸಿದ್ದರಾಮೋತ್ಸವ ಆರಂಭವಾಗಿದ್ದು, ಸಂಗೀತದ ಮೂಲಕವೇ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿಯಿತು. ಸಾಧುಕೋಕಿಲ ಮತ್ತು ತಂಡ ಭಾರೀ ಸಿದ್ದರಾಮಯ್ಯ ಅವರ ಅಭಿಮಾನಿಗಳನ್ನು ತಮ್ಮ ಸಂಗೀತದ ಮೂಲಕ ರಂಜಿಸಿದ್ದಾರೆ.

ಈ ಸಂದರ್ಭದಲ್ಲಿ ಎಂ. ಬಿ ಪಾಟೀಲ್ (m.b patil )ಮಾತನಾಡಿ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳು ಕೊಟ್ಟಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ನವರ ಸರ್ಕಾರ ಹೇಗಿತ್ತು. ಆದ್ರೆ ಇವತ್ತು ಬಿಜೆಪಿಯ 40% ಸರ್ಕಾರ ಆಗಿದೆ. ಪಿ ಎಸ್ ಐ ಹಗರಣ, ಹೀಗೆ ಹಲವು ಹಗರಣದಲ್ಲೂ ಮುಳುಗಿದೆ. ಸಿದ್ದರಾಮಯ್ಯ ನವ್ರು ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಕ್ಕೆ ದೊಡ್ಡ ಶಕ್ತಿ. ಅವ್ರ ನೇತೃತ್ವದಲ್ಲಿ ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋಣ. ಈ ಭ್ರಷ್ಟಚಾರ ಸರ್ಕಾರವನ್ನೂ ತೆಗೆಯೋಣ ಎಂದು ಹೇಳಿದ್ರು. ಇದನ್ನು ಓದಿ : – ಈ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯೋಣ – ಡಿ ಕೆ. ಶಿವಕುಮಾರ್

ಅಧಿಕಾರ ಇಲ್ಲದೆ ಇದ್ದಾಗ ಇಷ್ಟೊಂದು ಜನ ಸಮೂಹ ಸೇರುವುದು ಪ್ರಜಾಪ್ರಭುತ್ವದಲ್ಲಿಯೇ ಇದು ಮೈಲುಗಲ್ಲು- ರಮೇಶ್ ಕುಮಾರ್
ಸಿದ್ದರಾಮಯ್ಯ ನವರಿಗೆ ನನಗಿಂತ ಹೆಚ್ಚು ದೇವರು ಆಯುಷ್ಯ ಕೊಡಲಿ ಎಂದು ನಾನು ಹರಿಸುತ್ತೇನೆ. ಅಧಿಕಾರ ಇಲ್ಲದೆ ಇದ್ದಾಗ ಇಷ್ಟೊಂದು ಜನ ಸಮೂಹ ಸೇರುವುದು ಪ್ರಜಾಪ್ರಭುತ್ವದಲ್ಲಿಯೇ ಮೈಲುಗಲ್ಲು. ಯಾರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲವೋ ಅವ್ರು ಅಧಿಕಾರ ನಡೆಸುತ್ತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ತರೋಣ ಎಂದು ತಿಳಿಸಿದ್ರು.

ಕೆಳಹಂತದಅವಕಾಶವಚಿಂತರಿಗೆಅವಕಾಶಮಾಡಿಕೊಡುವವ್ಯಕ್ತಿ ಸಿದ್ದರಾಮಯ್ಯ – ಹೆಚ್.ಕೆಪಾಟೀಲ್
ಕೆಳ ಹಂತದ ಅವಕಾಶ ವಂಚಿತರಿಗೆ ಅವಕಾಶ ಮಾಡಿ ಕೊಟ್ಟ ವ್ಯಕ್ತಿ ಸಿದ್ದರಾಮಯ್ಯ ನವರು. ಪಂಚಾಯತ್ ರಾಜ್ಯಕ್ಕೆ ಶಕ್ತಿ ತುಂಬಿದವರು ಇವರು. ರಾಜ್ಯಕ್ಕೆ ಅನ್ನ ಭಾಗ್ಯ ತಂದವರು ಇವರು. ಹಸಿವು ಮುಕ್ತ ಕರ್ನಾಟಕ ಮಾಡಿದವ್ರು ಸಿದ್ದರಾಮಯ್ಯ ನವರು. ಇಂದು ಅವರ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದೇವೆ. ಎಲ್ಲಾ ಅಭಿಮಾನಿಗಳಿಗೂ ಸಂತೋಷ ಆಗುತ್ತಿದೆ ಎಂದು ಹೇಳಿದ್ರು.

75 ರ ಹುಡುಗ ನಮ್ಮ ಸಿದ್ದರಾಮಯ್ಯ – ಜಿ ಪರಮೇಶ್ವರ್
ಈ ರಾಜ್ಯ ಕಂಡಂತ ಹಿಂದುಳಿದ ದಲಿತ ಸಮುದಾಯಗಳಿಗೆ ಶಕ್ತಿ ತುಂಬುವ ನಮ್ಮ ನಾಯಕ ಸಿದ್ದರಾಮಯ್ಯ ನವರಿಗೆ ದೇವರು ಆಯುಷ್ಯ ಆರೋಗ್ಯ, ಸಿರಿ ಕೊಡಲಿ. 75 ರ ಹುಡುಗ ನಮ್ಮ ಸಿದ್ದರಾಮಯ್ಯ. 8 ವರ್ಷ ಅವರ ಜೊತೆಯಲ್ಲಿ ಕೆಲಸ ಮಾಡುವಂತೆ ಅವಕಾಶವನ್ನು ಸೋನಿಯಾಗಾಂಧಿ ನಮಗೆ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ನವ್ರು ನಮ್ಮಲ್ಲರಿಗೂ ಆದರ್ಶ ವಾಗಿದ್ದಾರೆ. ಬಳ್ಳಾರಿ( bellari )ಯಲ್ಲಿ ಗಣಿ ದನಿಗಳು ಲೂಟಿ ಮಾಡುತ್ತಿದ್ದಾರೆ ಎಂದು ವಿಧಾನಸೌದಲ್ಲಿ ಗುಡುಗಿದ್ದು ಸಿದ್ದರಾಮಯ್ಯ. ಬಳ್ಳಾರಿಗೆ ಬರುತ್ತೇನೆ ನಡಿ ಎಂದು ಹೇಳಿದ್ರು. ಅದರಂತೆ ರಾಜ್ಯ ತುಂಬಾ ಪಾದಯಾತ್ರೆ ಮಾಡಿ ಭ್ರಷ್ಟಚಾರವನ್ನೂ ಹಿಮ್ಮೆಟ್ಟಿಸಿದವರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಹೇಳಿದ್ರು. ಇದನ್ನು ಓದಿ : – ಪ್ರವಾಹ ಪೀಡಿತ ಭಟ್ಕಳಕ್ಕೆ ಇಂದು ಸಿಎಂ ಬೊಮ್ಮಾಯಿ ಭೇಟಿ

ಜಾತಿ ಧರ್ಮ ಎಲ್ಲವನ್ನು ಮೀರಿದ ಪರ್ವತ ಅಂದ್ರೆ ಸಿದ್ದರಾಮಯ್ಯ – ಸಚಿವೆ ಉಮಾಶ್ರೀ
ರಾಜಕಾರಣ ಅನ್ನುವುದು ವ್ಯಾಪಾರ ಅಲ್ಲ. ಕೆಲವ್ರು ರಾಜಕಾರಣವನ್ನೂ ವ್ಯಾಪಾರ ಅಂದುಕೊಂಡಿದ್ದಾರೆ . ಜಾತಿ ಧರ್ಮ ಎಲ್ಲವನ್ನು ಮೀರಿದ ಪರ್ವತ ಅಂದ್ರೆ ಸಿದ್ದರಾಮಯ್ಯ. ಕೊಟ್ಟ ಮಾತಿನಂತೆ ನಡೆದುಕೊಳ್ಳುವರು ಸಿದ್ದರಾಮಯ್ಯ. 15 ಲಕ್ಷ ಮನೆ ಕೊಟ್ಟುವರ ಸಿದ್ದರಾಮಯ್ಯ ಎಂದು ಹಾಡಿ ಹೊಗಳಿದ್ರು.

ಪ್ರಜಾಪ್ರಭುತ್ವವನ್ನೂ ಗಟ್ಟಿಗೊಳಿಸುವಲ್ಲಿ ಮುನ್ನಡೆದವರು ಸಿದ್ದರಾಮಯ್ಯ – ಬಿ.ಕೆ ಹರಿಪ್ರಸಾದ್
ಸಂವಿಧಾನ ಮತ್ತು ಪ್ರಜಾಪ್ರಭುತ್ವ ವನ್ನೂ ಗಟ್ಟಿಗೊಳಿಸುವಲ್ಲಿ ಮುನ್ನಡೆದವರು ಸಿದ್ದರಾಮಯ್ಯ. ಇಷ್ಟೊಂದು ರೈತರ ಪರ ನಿಂತವರು ಸಿದ್ದರಾಮಯ್ಯ. ಹಾಗಾಗಿ ಇವತ್ತು ರಾಹುಲ್ ಗಾಂಧಿ ( rahul gandhi ) ಅವರ ನೇತೃತ್ವದಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ರು.

ಇದನ್ನು ಓದಿ : –  ಉಪರಾಷ್ಟ್ರಪತಿ ಚುನಾವಣೆ- ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ಗೆ ಬಿಎಸ್ ಪಿ ಬೆಂಬಲ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!