ಧಾರವಾಡ ನೀರಾವರಿ ಇಲಾಖೆಯ (Irrigation department) ಮೇಲೆ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ , ನೀರಾವರಿ ಇಲಾಖೆ ಕಚೇರಿಯ ಎದುರು ಕಳಸಾ ಬಂಡೂರಿ ಹೋರಾಟ ಸಮಿತಿಯ ರೈತರು (Farmers) ಧರಣಿ ಮುಂದುವರೆಸಿದ್ದಾರೆ.
ಈ ಇಲಾಖೆ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಹೀಗಾಗಿಯೇ ಕಳಸಾ ಬಂಡೂರಿ ನಾಲಾ ಯೋಜನೆ (Nala project) ವಿಫಲವಾಗುತ್ತಿದೆ. ಈಗಾಗಲೇ ಯೋಜನೆಗೆ ಅನುಮೋದನೆ ಸಿಕ್ಕರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೀರಾವರಿ ಕಚೇರಿ ಎದುರು ರೈತರ 2 ನೇ ದಿನದ ಪ್ರತಿಭಟನೆ ಆರಂಭವಾಗಿದೆ.
ಮಹಿಳಾ ರೈತ ಮುಖಂಡರು ರಂಗೋಲಿ ಬಿಡಿಸುವ ಮೂಲಕ ಧರಣಿ ನಡೆಸಿದ್ದಾರೆ. ನೀರಾವರಿ ಇಲಾಖೆಯ ಭ್ರಷ್ಟಾಚಾರ ಬಯಲಿಗೆಳೆಯಲು CBI ತನಿಖೆಗೆ ವಹಿಸುವಂತೆ ರೈತರು ಧರಣಿ ಮುಂದುವರೆಸಿದ್ದಾರೆ. ಇದನ್ನೂ ಓದಿ : – ಚಿಕ್ಕಬಳ್ಳಾಪುರದಲ್ಲಿ ಅವ್ಯವಸ್ಥೆ ಆಗರವಾದ ಎಪಿಎಂಸಿ ಮಾರುಕಟ್ಟೆ