ಕರ್ನಾಟಕ – ಮಹಾರಾಷ್ಟ್ರ ಅಂತ ಬಡಿದಾಡುತ್ತಿರುವುದು ನಮ್ಮ ದೌರ್ಭಾಗ್ಯ – ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ ( SIDDARAMAIAH ) ಸಿಎಂ ಆದ್ರೆ ಮತ್ತೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತವೆ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ( SIDDARAMAIAH ) ಸಿಎಂ ಆದ್ರೆ ಮತ್ತೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತವೆ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಕಾಲದಲ್ಲಿ ಹಿಂದೂಗಳ ಹತ್ಯೆ ಆಗಿದೆ. ಕುಂಕುಮ ಇಟ್ಟುಕ್ಕೊಂಡವರನ್ನ ನೋಡಿದ್ರೆ ಹೆದರಿಕೆ ಬರುತ್ತೆ ಎಂದಿದ್ದು. ಆ ಸಮಯದಲ್ಲಿ PFI ಅವರನ್ನ ಬಿಡುಗಡೆ ಮಾಡಿದ್ದಕ್ಕೆ ಸಾಕ್ಷಿಗಳಿವೆ. ಸಿಟಿ ರವಿ ಅವರ ಮನೆಗೆ ಮುತ್ತಿಗೆ ಹಾಕಿದ್ರೆ ನಾವು ಕಾಂಗ್ರೆಸ್ ನವರ ಮನೆಗೆ ಮುತ್ತಿಗೆ ಹಾಕುತ್ತೇವೆ. ನಮ್ಮ ಸಂಸ್ಕೃತಿ ಅಂತದಲ್ಲ, ಸಿದ್ದರಾಮಯ್ಯ ಮತ್ತು ಪಟಾಲಂ ಎಚ್ಚರಿಕೆಯಿಂದ ಇರಬೇಕು ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ : –  ಪುಷ್ಪಕ ವಿಮಾನ ಚಿತ್ರಕ್ಕೆ 35 ವರ್ಷ – ಭಾವನಾತ್ಮಕ ಪತ್ರ ಬರೆದ ಕಮಲ್

Karnataka-Maharashtra border dispute Explained: What is Belagavi border dispute between Karnataka and Maharashtra | India News - Times of India
ಗಡಿ ವಿಚಾರವಾಗಿ ಮಾತನಾಡಿದ ಜೋಶಿ, 2 ರಾಜ್ಯಗಳ ರಾಜಕಾರಣಿಗಳಿಗೆ ಹೇಳುತ್ತಿದ್ದೇನೆ. ಇದು ಮುಗಿದ ಹೋದ ಅಧ್ಯಾಯ, ಮಹಾರಾಷ್ಟ್ರ ದವರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರ ನಮ್ಮ ಶಾಸಕರಿಗೆ ಹೇಳಿದ್ದೇನೆ ವಿವಾದಾತ್ಮಕ ಹೇಳಿಕೆಗಳನ್ನ ಕೊಡಬೇಡಿ ಎಂದು ಹೇಳಿದ್ರು. ಇಲ್ಲಿ ಮರಾಠಿಗರು ಕನ್ನಡಿಗರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಧಾರವಾಡ ಬೆಳಗಾವಿಯಲ್ಲಿ ಮರಾಠಿಗರು ಇದ್ದಾರೆ. ಯಾರಿಗೂ ತೊಂದರೆ ಇಲ್ಲ, ಮಹಾರಾಷ್ಟ್ರ ,ಸೊಲ್ಲಾಪೂರ, ಸಾಂಗ್ಲಿ , ಕೊಲ್ಲಾಪೂರ ದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ. ಸಮಸ್ಯೆಗಳಿದ್ದರೆ ಆಯಾ ರಾಜ್ಯ ಸರಕಾರದ ಜೊತೆ ಮಾತನಾಡಿಕ್ಕೊಳ್ಳಬೇಕು. ದೇಶ ಒಂದು ಇದೆ. ನಾವು ಚೀನಾ ಪಾಕಿಸ್ತಾನದ ಜೊತೆ ಹೋರಾಡಬೇಕು . ಅದರ ಬದಲಾಗಿ ಕರ್ನಾಟಕ ಮಹಾರಾಷ್ಟ್ರ ಅಂತ ಬಡಿದಾಡುತ್ತಿರುವುದು ನಮ್ಮ ದೌರ್ಭಾಗ್ಯ. ಮಹಾರಾಷ್ಟ್ರ ದವರು ಕೋರ್ಟ್ ಗೆ ಹೋಗಬಾರದಿತ್ತು. ನನಗೆ ವಿಶ್ವಾಸವಿದೆ ಕರ್ನಾಟಕದ ಒಂದಿಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗಲ್ಲ. ಮಹಾರಾಷ್ಟ್ರದ ಒಂದಿಂಚು ಭೂಮಿ ಕರ್ನಾಟಕಕ್ಕೆ ಬರಲ್ಲ ಎಂದು ಹೇಳಿದ್ರು.

ಇದನ್ನೂ ಓದಿ : – ಒಕ್ಕಲಿಗರ ಮೀಸಲಾತಿ ವಿಚಾರ – ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!