ಕೋಲಾರ (Kolar) ದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh kumar) ಆಪ್ತ ನಗರಸಭೆ ಸದಸ್ಯ ಅಂಬರೀಶ್ ನನ್ನು ಗಲ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಡಾ ಬಿ.ಆರ್ ಅಂಬೇಡ್ಕರ್ (DR BR. Ambedkar) ಅವರ ಪರಿನಿರ್ವಾಣ ದಿನದಂದು, ನಗರಸಭೆ ಕಚೇರಿಯಲ್ಲಿ ಅಂಬೇಡ್ಕರ್ ಅವರಿಗೆ ನಗರಸಭೆ ಸದಸ್ಯ ಅಂಬರೀಶ್ ಧಿಕ್ಕಾರ ಹಾಕಿದ್ದಾರೆ.
ಧಿಕ್ಕಾರ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ಮಾಜಿ ನಗರಸಭೆ ಸದಸ್ಯ ರಾಜೇಶ್ ದೂರು ನೀಡಿದ್ದರು. ನಗರಸಭೆ ಸದಸ್ಯ ಅಂಬರೀಶ್ ನನ್ನು ಬಂಧಿಸಿ, ಹೇಳಿಕೆ ಪಡೆದು ಸ್ಟೇಷನ್ ಬೇಲ್ ನೀಡಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅಂಬರೀಶ್ ವಿರುದ್ದ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ : – ಕಾಂಗ್ರೆಸ್ ನಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲು ಮಲ್ಲಿಕಾರ್ಜುನ್ ಖರ್ಗೆ ಸೂಚನೆ