ಇನ್ಸ್ಟಾಗ್ರಾಮ್ ನಲ್ಲಿ ಹಿಂದೂ ಯುವತಿ ಮುಸ್ಲಿಂ ಯುವಕ ಲವ್ ಜಿಹಾದ್

ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಇನ್ಸ್ಟಾಗ್ರಾಮ್ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್, ಕುಷ್ಟಗಿಯ ಇಂದಿರಾನಗರದ ಯುವತಿ ಮದುವೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಜೋಡಿ ಪರಿಚಯವಾಗಿದ್ದರು.

ಕೊಪ್ಪಳ (Koppala) ಜಿಲ್ಲೆ ಕುಷ್ಟಗಿಯಲ್ಲಿ ಇನ್ಸ್ಟಾಗ್ರಾಮ್ (Instagram) ಲವ್ ಜಿಹಾದ್ (Love jihad) ಪ್ರಕರಣ ಬೆಳಕಿಗೆ ಬಂದಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್, ಕುಷ್ಟಗಿಯ ಇಂದಿರಾನಗರದ ಯುವತಿ ಮದುವೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಜೋಡಿ ಪರಿಚಯವಾಗಿದ್ದರು.

ಸ್ನೇಹದಿಂದ ಆರಂಭವಾದ ಪರಿಚಯ ಮದುವೆಯಲ್ಲಿ ಮುಕ್ತಾಯವಾಗಿದೆ. ಸದ್ಯ ಲವ್ ಜಿಹಾದ್ ಜೋಡಿ ಪ್ರೇಮ ವಿವಾಹವಾಗಿದ್ದಾರೆ. ಮನೆ ಬಿಟ್ಟು ಹೋದ ಯುವತಿ ಮುಸ್ಲಿಂ (Muslim) ಸಂಪ್ರದಾಯದಂತೆ ಮದುವೆಯಾಗಿದ್ದಾಳೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣ ನಡೆದ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಪ್ರೇಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಲವಂತದ ಮತಾಂತರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಾಳೆ.

ಇದನ್ನು ಓದಿ :- ಬೆಂಗಳೂರಿನ ಗಲ್ಲಿ ಗಲ್ಲಿ ಗಲ್ಲಿಯಲ್ಲೂ ನಡೆಯಲಿದೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್- ಕುಡಿದು ಪೊಲೀಸರ ಕೈಗೆ ತಗಲಾಕೊಂಡ್ರೆ ಕೇಸ್ ಫಿಕ್ಸ್..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!