ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಅದರಿಂದ ಹೊರ ಬರುವ ಶಬ್ದದ ವಿರುದ್ಧ. ಅವರು ಆಜಾನ್ ಕೂಗಿದರೆ ನಾವು ಸುಪ್ರಭಾತ ಹಾಡುತ್ತೇವೆ. ಮಸೀದಿಗಳ ಮೇಲಿನ ಅನಧಿಕೃತ ಧ್ವನಿವರ್ಧಕ ತೆರವು ಗೊಳಿಸಲು ಶ್ರೀರಾಮ ಸೇನೆ ಗಡುವು ನೀಡಿತ್ತು.
ಆದರೆ ಅದು ಇಂದಿಗೆ ಮುಕ್ತಾಯವಾಗಿ ನಾಳೆಯಿಂದ ಎಲ್ಲಾ ಮಂದಿರಗಳಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ನಡೆಯಲಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ಸಿದ್ದಲಿಂಗ ಸ್ವಾಮೀಜಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಯುಪಿಯಲ್ಲಿರೋದು ಯೋಗಿ ಸರ್ಕಾರ, ರಾಜ್ಯದಲ್ಲಿರೋದು ಭೋಗಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಏನಾದ್ರು ಅನಾಹುತ ಸಂಭವಿಸಿದ್ರೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂಓದಿ : – ಮೇ 21ಕ್ಕೆ ನಿಗದಿಯಂತೆ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ