ಎರಡು ಕಡೆ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಮನೆ ದೇವರ ನುಡಿ ವಿಚಾರ ಕುರಿತಂತೆ ಕೋಲಾರದಲ್ಲಿ ಉಸ್ರುವಾರಿ ಸಚಿವ ಮುನಿರತ್ನ ( MUNIRATHNA )ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆಶಿ ಮನೆದೇವ್ರು ಹೇಳಿದಂತೆ ಒಂದು ಕಡೆ ಸಿದ್ದರಾಮಯ್ಯ ನಿಲ್ಲಲಿ, ಸಿದ್ದರಾಮಯ್ಯ ಮನೆದೇವ್ರು ಹೇಳಿದಂತೆ ಎರಡು ಕಡೆ ನಿಂತರೆ ಎಡವಟ್ಟಾಗುತ್ತೆ. ಡಿಕೆಶಿ ಹೇಳಿದಂತೆ ಕೋಲಾರ ಜಿಲ್ಲೆಯನ್ನ ಸಿದ್ದರಾಮಯ್ಯ ಬಿಡಲಿ. ಕೋಲಾರ (KOLARA)ದಲ್ಲಿ ಬಿಜೆಪಿಗೆ ಜೆಡಿಎಸ್ ಎದುರಾಳಿ, ಇಲ್ಲಿ ಕಾಂಗ್ರೆಸ್ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನ ಯಾಮಾರಿಸಿ ಕೋಲಾರಕ್ಕೆ ಕರೆತರಲಾಗ್ತಿದೆ. ಸಿದ್ದರಾಮಯ್ಯ ಸೋಲಿಸಲು ಒಳಸಂಚಿನಿಂದ ಕೆಲ ಕಾಂಗ್ರೆಸ್ ನಾಯಕರು ಕೋಲಾರಕ್ಕೆ ಆಹ್ವಾನಿಸಿದ್ದಾರೆ. ಕೋಲಾರ ಸ್ಪರ್ಧೆ ವಿಚಾರದಲ್ಲಿ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆ ಇಡಬೇಕು. ಸಿದ್ದರಾಮಯ್ಯ ಎದುರಿಸಲು ಬಿಜೆಪಿ ಸನ್ನದ್ದವಾಗಿದೆ. ಸಂಕ್ರಾಂತಿ ನಂತರ ಕೋಲಾರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರು ಸ್ಪರ್ಧೆ ಮಾಡಬಹುದು. ಸಿದ್ದರಾಮಯ್ಯ ( SIDDARAMAIAH ) ಅವರು ಈವರೆಗೂ ಒಂದೇ ಒಂದು ಕ್ಷೇತ್ರದಲ್ಲಿ ನಿಂತಿಲ್ಲ ಪ್ರತೀ ಚುನಾವಣೆಗೂ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ವರುಣಾ, ಚಾಮುಂಡೇಶ್ವರಿ ಬಾದಾಮ..ಇದೀಗ ಕೋಲಾರ ಕ್ಷೇತ್ರದಲ್ಲಿ ನಿಂತಿದ್ದಾರೆ. ರಾಜೀಕೀಯ ಜೀವನದಲ್ಲಿ ಒಂದು ಕಡೆ ನೆಲೆಯೂರಬೇಕು, ಆ ಕ್ಷೇತ್ರಕ್ಕೆ ನಮ್ಮ ಕೊಡುಗೆ ಹೆಚ್ಚಾಗಿರಬೇಕು. ಸಿದ್ದರಾಮಯ್ಯ ಯಾಕೆ ಪದೇ ಪದೇ ಕ್ಷೇತ್ರ ಬದಲಾವಣೆ ಮಾಡ್ತಾರೆ ಗೊತ್ರಿಲ್ಲ. ಕೆಲವು ಹಿರಿಯರು ಒಂದೇ ಕ್ಷೇತ್ರದಲ್ಲಿ ಏಳು ಬಾರಿ ಗೆದ್ದಿರುವ ಉದಾಹರಣೆ ಇದೆ. ಇದನ್ನು ಓದಿ :- ಬಿಜೆಪಿ – ಜೆಡಿಎಸ್ ಮೈತ್ರಿ ಇರುವುದಿಲ್ಲ ಸ್ವತಂತ್ರವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ – ಸಿ.ಪಿ.ಯೋಗೇಶ್ವರ್
ಕ್ಷೇತ್ರ ಬದಲಾವಣೆ ಮಾಡೋದು ಒಳ್ಳೆ ಸಂದೇಶ ಅಲ್ಲ, ಕೋಲಾರ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡಿರೋದು ತಪ್ಪು ನಿರ್ಧಾರ ಎಂದು ಮುನಿರತ್ನ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ೪೦ ಸಾವಿರ ಮತದಾರರು ನನ್ನನ್ನ ಗೆಲಿಸ್ತಾರೆ ಎಂದು ಕೋಲಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಇಲ್ಲಿನ ಶಾಸಕರು ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ. ಸಿದ್ದರಾಮಯ್ಯನವರನ್ನ ಮುಗಿಸಲು ಷಡ್ಯಂತ್ರ ಮಾಡಿದ್ದಾರೆ. ಅವರು ಇದನ್ನ ಸೂಕ್ಮವಾಗಿ ಆರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನು ಓದಿ :- ವಿಶ್ವದ ಅತಿ ಉದ್ದನೆಯ ನದಿ ವಿಹಾರ ಗಂಗಾ ವಿಲಾಸ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ….!