ಕೋಲಾರದಲ್ಲಿ (Kolar) ನಾಳೆ ಅಂತರಾಷ್ಟ್ರೀಯ 8 ನೇ ಯೋಗ ದಿನಾಚರಣೆ (Yoga day) ಹಿನ್ನೆಲೆ ಸಂಸದ ಎಸ್ ಮುನಿಸ್ವಾಮಿ (Muniswami) ನೇತೃತ್ವದಲ್ಲಿ ಸಕಲ ಸಿದ್ದತೆ ನಡೆದಿದೆ.
ಯೋಗ ದಿನಾಚರಣೆಗೆ ಹೆಚ್ಚಾಗಿ ಶಾಲಾ ಮಕ್ಕಳು ಬರುತ್ತಿರುವ ಹಿನ್ನೆಲೆಯಲ್ಲಿ, ಎಸ್ಪಿ ಡಿ.ದೇವರಾಜ್ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೋಲಾರ ಜಿಲ್ಲಾಡಳಿತ ವತಿಯಿಂದ ವಿಶೇಷವಾಗಿ ಅಂತರಗಂಗೆಯ ತೇರಹಳ್ಳಿ ಬೆಟ್ಟದ ವಿಶಾಲ ಜಾಗದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ಡಿ ದೇವರಾಜ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ನಿಸರ್ಗದ ಮಧ್ಯ ಯೋಗ ದಿನಾಚರಣೆ ಮಾಡುವುದು ಬಹಳ ವಿಶೇಷ, ಸಾವಿರಾರು ಶಾಲಾ ಮಕ್ಕಳು, ಶಿಕ್ಷಕರು, ಯೋಗಪಟ್ಟುಗಳು, ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಮಳೆ ಬಂದ್ರೆ ಮುಂದಿನ ಬದಲಾವಣೆಗಳನ್ನು ನೋಡಿ ಮಾಡಲಾಗುತ್ತದೆ.
ತೇರಹಳ್ಳಿ ಬೆಟ್ಟಕ್ಕೆ ಆಗಮಿಸುವ ರಸ್ತೆಗೆ ಒನ್ ವೇ ಮಾಡಿ ಯಾವುದೇ ತೊಂದರೆ ಆಗದಂತೆ ವಾಹನಗಳನ್ನು ಕಳಿಸಲಾಗುತ್ತದೆ. 400 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಆಯೋಜನೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚು ಜನ ಆಗಮಿಸುವ ಸಾಧ್ಯತೆ ಇದೆ, ಸೂಕ್ತ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : – ಧಾರವಾಡದಲ್ಲಿ ಅಗ್ನಿಪಥ್ ಯೋಜನೆಗೆ ವಿರೋಧ – ಖಾಕಿ ರೂಟ್ ಮಾರ್ಚ್