ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ನಗರದ ರಾಷ್ಟ್ರೀಯ ಹೆದ್ದಾರಿ 75 ರ ಬೈಪಾಸ್ ರಸ್ತೆ ಬಳಿ ಜೆಡಿಎಸ್ (JDS) ನಗರಸಭೆ ಸದಸ್ಯ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ.
ಮುಳಬಾಗಿಲು ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ (Samruddi manjunath) ಹುಟ್ಟು ಹಬ್ಬ ಪ್ರಯುಕ್ತ ಕೇಕ್ ಕತ್ತರಿಸಿ (Cake cutting) ಸಂಭ್ರಮಿಸಿದ್ದಾರೆ. ಮುಳಬಾಗಿಲು ನಗರದ 14 ನೇ ವಾರ್ಡ್ ಜೆಡಿಎಸ್ ಸದಸ್ಯ ವಜೀರ್ ಹಾಗು ಸ್ನೇಹಿತರಿಂದ ಹುಟ್ಟು ಹಬ್ಬ ಆಚರಣೆ ನಡೆದಿದೆ. ಇತ್ತೀಚೆಗೆ ನಡೆದ ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ (Mohan reddy) ಕೊಲೆ ಬೆನ್ನಲ್ಲೆ ತಲ್ವಾರ್ ಬಳಕೆ ಮಾಡಿದ್ದಾರೆ.
ತಲ್ವಾರ್ (Talwar) ನಿಂದ ಕೇಕ್ ಕತ್ತರಿಸಿರೊ ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಕೃತಿ ಪ್ರದರ್ಶನ ಮಾಡಿರುವರ ವಿರುದ್ದ ಕಾನೂನು ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ : – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಾಳೆ ರಾಜ್ಯಕ್ಕೆ ಆಗಮನ