ಕುರುಡುಮಲೆ ಗಣೇಶ ನಂಬಿದವರನ್ನ ಯಾರನ್ನು ಕೈಬಿಡೋದಿಲ್ಲ ಅಂತ ನಂಬಿಕೆ ಇದೆ .1994 ರಲ್ಲಿ ಕುರುಡುಮಲೆಯಿಂದ ಚುನಾವಣೆ (Election) ಗೆ ಪ್ರಚಾರ ಆರಂಭಿಸಿದ್ರು ಎಂದು ನಿಖಿಲ್ ಕುಮಾರಸ್ವಾಮಿ (Nikhil kumarswamy) ಹೇಳಿದ್ದಾರೆ. ಮತ್ತೆ ಅದೇ ಇತಿಹಾಸ 2012 ರಲ್ಲಿ ಮರುಕಳಿಸುತ್ತದೆ. ಪಂಚರತ್ನ ಯೋಜನೆ ಕುಮಾರಸ್ವಾಮಿಯವರ ಕನಸ್ಸಿನ ಕೂಸು . ಇಡೀ ರಾಜ್ಯದ ಜನರ ಬದುಕು ಕಟ್ಟಿಕೊಡುವ ಯೋಜನೆಯಿದೆ.
6 ಸಾವಿರ ಪಂಚಾಯಿತಿ ವ್ಯಾಪ್ತಿಯಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಬೇಕು ಅಂತ ಯೋಜನೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ರು. ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆ ಹೇಗೆ ನಡೆಯುತ್ತವೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹೈಟೆಕ್ ಆಸ್ಪತ್ರೆಗಳಾಗಬೇಕು . ನಿರುದ್ಯೋಗದ ಸಮಸ್ಯೆ ಇಡೀ ದೇಶದಲ್ಲಿ ಎತ್ತಿ ಕಾಣಿಸುತ್ತಿದೆ . ಎರಡು ರಾಷ್ಟ್ರೀಯಾ ಪಕ್ಷಗಳು ಯುವಕರ ಬಗ್ಗೆ ಯೋಚನೆ ಮಾಡ್ತಿಲ್ಲ . 1 ಲಕ್ಷ ಯುವಕರಿಗೆ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಕಲ್ಪಿಸಬೇಕು ಎಂಬ ಧ್ಯೇಯ ಹೊಂದಿದ್ದಾರೆ. ಹೊರ ರಾಜ್ಯದವರು ಕೈಗಾರಿಕೆಗಳಲ್ಲಿ ಕೆಲಸ ಮಾಡ್ತಿದ್ದಾರೆ . ಸ್ಥಳೀಯ ಕನ್ನಡಿಗರಿಗೆ ಅನ್ಯಾಯಹಾಗ್ತಿದೆ . ಹಾಗಾಗಿ 50% ಮೀಸಲಾತಿಯನ್ನು ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಅವಕಾಶ ನೀಡಬೇಕು ಎಂದು ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ರು.
ಇದೇ ವೇಳೆ ಶೋಶಿತರಗೆ, ಬಡವರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಇದೆ. ಸಂಪೂರ್ಣ ಬಹುಮತ ಪಕ್ಷಕ್ಕೆ ಬಂದಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಯೋಜನೆ ಇಟ್ಟುಕೊಂಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : – 200 ಕೋಟಿ ರೂಪಾಯಿ ಅಕ್ರಮ ಆಸ್ತಿ ಖರೀದಿ ಆರೋಪ – ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು