ನಾನು 1991ರಲ್ಲಿ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದೆ. ಭಯ್ಯಾಪೂರ ಸಂಬಂಧಿಕರು ನಾನು ಲೋಕಸಭೆಗೆ ನಿಂತಾಗ ಹಗಲು- ರಾತ್ರಿ ಕೆಲಸ ಮಾಡಿದ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಹೇಳಿದ್ದಾರೆ. ಕೊಪ್ಪಳದ ಕುಷ್ಟಗಿ ಪಟ್ಟಣದಲ್ಲಿ ನಡೆಯುತ್ತಿರುವ ಶಾಸಕ ಅಮರೇಗೌಡ ಭಯ್ಯಾಪೂರ 69ನೇ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ರಾಜೀವ್ ಗಾಂಧಿ ಹತ್ಯೆ ಆಗಿದ್ದರಿಂದ ನಾನು ಸೋಲಬೇಕಾಗಿ ಬಂತು. ಆಗ ಗೆದ್ದಿದ್ದರೆ ನಾನು ಲೋಕಸಭೆಗೆ ಹೋಗುತ್ತಿದ್ದೆ. ಆಗ ನಾನು ಸೋತಿದ್ದು ಒಳ್ಳೆಯದೇ ಆಗಿದೆ. ಒಂದೊಮ್ಮೆ ನಾನು ಆಗ ಗೆದ್ದಿದ್ದರೆ ಸಿಎಂ ಆಗುವ ಅವಕಾಶವೇ ಸಿಗುತ್ತಿರಲಿಲ್ಲ. ನಾನು ಕೊಪ್ಪಳ ಜನತೆಯನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಮೈಸೂರಿನಿಂದ ಬಂದು ನಿಂತಾಗ ಇಲ್ಲಿನ ಜನ ಆತ್ಮೀಯವಾಗಿ ವೋಟ್ ಹಾಕಿದ್ರು ಎಂದು ಹೇಳಿದ್ರು.
ಮಾಜಿ ಶಾಸಕ ಹಸನ್ ಸಾಬ್ ದೋಟಿಹಾಳ ಸಿದ್ದರಾಮಯ್ಯ ಅವರಿಗೆ ಕುಷ್ಟಗಿ ಕ್ಷೇತ್ರಕ್ಕೆ ಆಹ್ವಾಮ ವಿಚಾರವಾಗಿ ಮಾತನಾಡಿದ ಅವರು, ನಾನು ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ : – ನಿನ್ನನ್ನು ಮಂತ್ರಿ ಮಾಡಿದ್ದೇ ನಾನು ಅನ್ನೋದೇ ಮರೆತೆಯೇನಪ್ಪ ವಿಶ್ವನಾಥ್ ? ವಿ ಶ್ರೀನಿವಾಸ ಪ್ರಸಾದ್
ನಡ್ಡಾ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ
ನೀವು ಇಲ್ಲಿ ಬಂದು ಲಂಚ ರಹಿತ ಸರ್ಕಾರ ಅಂತಾ ಸುಳ್ಳು ಹೇಳ್ತಿರಾ..? ಅಭಿವೃದ್ಧಿ ಕಾರ್ಡ್ ಹಿಡಿದುಕೊಂಡು ಹೋಗಿ ಅಂತಾ ಹೇಳ್ತಿರಲ್ಲ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮಹದಾಯಿ ನೀರಾವರಿ ಯೋಜನೆ ಜಾರಿಗೆ ನಾನು ಸರ್ವ ಪಕ್ಷ ನಿಯೋಗದೊಂದಿಗೆ ಹೋಗಿದ್ದೆ. ಆಗ ಮೋದಿ ಮಾತನಾಡಲಿಲ್ಲ. ಬದಲಾಗಿ ಗೋವಾ ಸರ್ಕಾರದ ಜೊತೆಗೆ ನೀವೇ ಮಾತನಾಡಿ ಎಂದರು. ಮೋದಿ ಗೋವಾ, ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತನಾಡಲೇ ಇಲ್ಲ. 40 % ಕಮಿಷನ್ ಸರ್ಕಾರ ಅಂತಾ ವಿಧಾನಸೌಧದ ಗೋಡೆ ಹೇಳ್ತಿವೆ. ಇದನ್ನು ನಾವು ಹೇಳಿಲ್ಲ, ಸ್ವತಃ ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ಹೇಳಿದ್ದಾರೆ. ಮೋದಿ ನಾ ಕಾವೋಂಗಾ, ನಾ ಖಾನೆ ದೋಂಗಾ ಅಂತಾರೆ. ಇಲ್ಲಿ ಬಿಜೆಪಿ ( BJP ) ಸರ್ಕಾರ ಕೇವಲ ಕೆಲಸ ಮಾಡಲು ಅಷ್ಟೇ ಅಲ್ಲ, ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದ್ರು.
ಯಡಿಯೂರಪ್ಪ ( YEDIURAPPA ) ಅವರನ್ನು ಸುಮ್ ಸುಮ್ಮನೆ ಸಿಎಂ ಸ್ಥಾನದಿಂದ ಕಿತ್ತಾಕಿದ್ರು. ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ರು. ಯಾಕೆಂದರೆ ಇವರಿಗೆ RSS ಹೇಳಿದಂತೆ ಕುಣಿವವರು ಬೇಕು. ಅದಕ್ಕಾಗಿ ಇವರು ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕಿತ್ತಾಕಿದ್ರು . ಬಸವರಾಜ ಬೊಮ್ಮಾಯಿ RSS ಕುತ್ಕೋ ಅಂದ್ರೆ ಕೂತ್ಕೋತಾರೆ, ನಿಲ್ಲು ಅಂದ್ರೆ ನಿಲ್ತಾರೆ. ಮೋದಿ ಇವರಿಗೆಲ್ಲ ಹೆಡ್ ಮಾಸ್ಟರ್ ಇದ್ದಂತೆ . ಅಮಿತ್ ಶಾ ಅಸಿಸ್ ಟೆಂಟ್ ಹೆಡ್ ಮಾಸ್ಟರ್ ಎಂದು ಗುಡುಗಿದ್ರು. ಇದನ್ನು ಓದಿ : – ದೇಶದಲ್ಲಿ ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ – ಡಿ.ಕೆ ಶಿವಕುಮಾರ್
ಕೆ.ಆರ್ ಪುರಂ ಇನ್ಸ್ ಪೆಕ್ಟರ್ ನಂದೀಶ್ ಸಾವಿಗೆ ಲಂಚ ಕಾರಣ. 70-80 ಲಕ್ಷ ಕೊಟ್ಟು ಪೋಸ್ಟಿಂಗ್ ತಗೊಂಡು ಬಂದಿದ್ದಾನೆ. ಸಾಲ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಂತಾ ನಾನು ಹೇಳಿಲ್ಲ. ಸ್ವತಃ ಎಂಟಿಬಿ ನಾಗರಾಜ ( MTB NAGARAJ ) ಹೇಳಿದ್ದಾರೆ ಎಂದು ತಿಳಿಸಿದ್ರು.
ಇಂದಿರಾಗಾಂಧಿ ( INDIRA GANDHI ) ಉಳುವವನೇ ಭೂಮಿ ಒಡೆಯ ಅಂತಾ ಕಾನೂನು ತಂದರು. ಬಿಜೆಪಿಗಳು ಉಳ್ಳವನೇ ಭೂಮಿ ಒಡೆಯ ಅಂತಾ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಬಿಜೆಪಿಗರು ಜಾತಿ- ಧರ್ಮದ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ. ಜನರ ಮನಸ್ಸು ಜೋಡಿಸಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಬಲ ತುಂಬಲು 2023ರಲ್ಲಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಮನವಿ ಎಂದು ಮಾಡಿದ್ರು. ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ರು.
ಇದನ್ನು ಓದಿ : – 100 ದಿನ ಪೂರೈಸಿದ ಭಾರತ್ ಜೋಡೋ ಯಾತ್ರೆ – ಇದೊಂದು ರಾಷ್ಟ್ರೀಯ ಜನಾಂದೋಲನ ಎಂದ ಮಲ್ಲಿಕಾರ್ಜುನ ಖರ್ಗೆ