ನಾನು 4 ಬಾರಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. 2 ಬಾರಿ ಗೆದ್ದಿದ್ದೇನೆ 2 ಬಾರಿ ಸೋತಿದ್ದೇನೆ ಎಂದು ಕೊಪ್ಪಳದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ (Iqbal Ansari) ಹೇಳಿದ್ದಾರೆ. ಕೊಪ್ಪಳ (koppala) ದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಕಾರಣಕ್ಕೆ ಕ್ಷೇತ್ರದ ಜನ ನನ್ನ ಪರ ಇದ್ದಾರೆ ಎಂದು ಹೇಳಿದ್ರು.
ಕುಷ್ಟಗಿ ಕ್ಷೇತ್ರಕ್ಕೆ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂಬ ಹೆಚ್.ಆರ್. ಶ್ರೀನಾಥ್ ( h.r vishwanath ) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಅವರು ರಕ್ತಗತವಾಗಿ ಮಾಡಿಕೊಂಡು ಬಂದ ರಾಜಕೀಯ. ಎಲ್ಲ ಮುಸ್ಲಿಂಮರು ಎಲ್ಲಿ ಸೋಲುತ್ತಾರೋ ಅಲ್ಲಿ ಟಿಕೆಟ್ ಕೊಡು ಅಂತಾರೆ. ಸೋತ ನಂತರ ಮುಸ್ಲಿಂಮರು ಸೋಲುತ್ತಾರೆ ಅಂತಾರೆ. ನಾನು ಗಂಗಾವತಿಯಲ್ಲಿ 2 ಬಾರಿ ಗೆದ್ದಿದ್ದೇನೆ. ಆಗ ನಾನು ಶ್ರೀನಾಥ್ ಬೆಂಬಲದಿಂದ ಗೆದ್ದಿಲ್ಲ. ಅವರಿಂದ ನನಗೆ 1 ವೋಟ್ ಕೂಡ ಬಂದಿರಲಿಲ್ಲ ಎಂದು ತಿಳಿಸಿದ್ರು. ಇದನ್ನು ಓದಿ : – ಕರ್ನಾಟಕಕ್ಕೆ ಒಂದಿಂಚು ಭೂಮಿ ಬಿಟ್ಟುಕೊಡಲ್ಲ – ಮಹಾರಾಷ್ಟ್ರ ವಿಧಾನಸಭೆಯಲ್ಲಿ ಫಡ್ನವೀಸ್ ಘೋಷಣೆ
ಜನಾರ್ದನ ರೆಡ್ಡಿ ( janardhan reddy ) ಗಂಗಾವತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರೆ ಬಂದರೂ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ರಾಜ್ಯ ಮತ್ತು ಕೇಂದ್ರದ ಎಲ್ಲ ಮುಖಂಡರು ನಮ್ಮ ಪರ ಇದ್ದಾರೆ. ನನಗೆ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸದಿಂದ ಸಾಕಷ್ಟು ಸಂಘಟನೆ ಮಾಡಿದ್ದೇನೆ. ಒಬ್ಬನೇ ಬರೋಬ್ಬರಿ 80 ಸಾವಿರ ಡಿಜಿಟಲ್ ಮೆಂಬರ್ ಶಿಪ್ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ : – ವಿಧಾನಸಭೆ ಅಧಿವೇಶನಕ್ಕೆ ಸಿಎಂ ಗೈರು – ಸಿದ್ದರಾಮಯ್ಯ ಆಕ್ಷೇಪ