ಜರ್ನಾರ್ದನ ರೆಡ್ಡಿ ಬಹುತೇಕ ಗಂಗಾವತಿ ( GANGAVATHI ) ಯಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಕ್ರಿಶ್ಚಿಯನ್ ಸಮುದಾಯದ ಮತ ಸೆಳೆಯಲು ಮುಂದಾದರೇ ಎನ್ನುವ ಪ್ರಶ್ನೆ ಕಾಡತೊಡಗಿದೆ. ಇದಕ್ಕೆ ಕ್ರಿಶ್ಚಿಯನ್ ಶಾಲೆಗೆ ಭೇಟಿ ನೀಡಿರುವುದು ಕಾರಣವಾಗಿದೆ. ಗಂಗಾವತಿಯ ಜಯನಗರದಲ್ಲಿರುವ ಕ್ರಿಶ್ಚಿಯನ್ ಸಮುದಾಯದ ಶಾಲೆಯ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ( JANARDHAN REDDY ) ಭಾಗಿಯಾದರು.
ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದ ರೆಡ್ಡಿ, ಶಾಲೆಯಲ್ಲಿ ಆಯೋಜಿಸಿದ ವಿಜ್ಞಾನ, ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ( BJP ) ಮುಖಂಡರಾದ ಬಿಜೆಪಿ ಬಳ್ಳಾರಿ ಜಿಲ್ಲಾ ಸಹ ಪ್ರಭಾರಿ ವೀರುಪಾಕ್ಷಪ್ಪ ಸಿಂಗನಾಳ್, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಜೋಗದ ನಾರಾಯಣಪ್ಪ ನಾಯಕ್ ಭಾಗಿಯಾಗಿದ್ರು. ಆದರೆ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ರೆಡ್ಡಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ : – ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದ ಸರ್ಕಾರ
ಪರೋಕ್ಷವಾಗಿ ಗಂಗಾವತಿಯಲ್ಲಿ ಸ್ಪರ್ಧೆ ಮಾಡುವ ಸುಳಿವು ನೀಡಿದ ರೆಡ್ಡಿ
ನಂತರ ಮಾತನಾಡಿದ ಅವರು, ನಿಮ್ಮೆಲ್ಲ ಕಷ್ಟಸುಖದಲ್ಲಿ ನಾನು ಭಾಗಿ ಯಾಗಿರುತ್ತೇನೆ. ಯಾವುದೇ ಸ್ವಾರ್ಥ ಇಲ್ಲದೇ ನಿಮ್ಮೊಂದಿಗೆ ಇರುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದ್ರು. ಕೆಲವೊಂದು ಕಾರಣದಿಂದ ನಾನು ಬಳ್ಳಾರಿ ( BALLARI ) ಯಿಂದ ಹೊರಗೆ ಇರಬೇಕಿದೆ. ನನಗೆ ಬಹಳ ಇಷ್ಟವಾದ ಸ್ಥಳ ಗಂಗಾವತಿ. ಸಾರ್ವಜನಿಕವಾಗಿ ಗಂಗಾವತಿಯಲ್ಲಿ ನನ್ನ ಮೊದಲನೇ ಕಾರ್ಯಕ್ರಮ. ಸರಸ್ವತಿ ಆಶೀರ್ವಾದ ಪಡೆದಿದ್ದೇನೆ. ಆಸ್ತಿ ದೋಚಿಕೊಂಡು ಹೋಗಬಹುದು. ಆದ್ರೆ ವಿದ್ಯೆ, ಬುದ್ದಿ ಯಾರೂ ಕಳ್ಳತನ ಮಾಡಲು ಆಗುವುದಿಲ್ಲ. ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲರೂ ಸಹೋದರತ್ವದಿಂದ ಬಾಳಿದರೆ ಸುಖವಾಗಿ ಇರುತ್ತೇವೆ ಎಂದು ಹೇಳಿದ್ರು.
ರೆಡ್ಡಿ ಟೆಂಪಲ್ ರನ್
ನಿನ್ನೆ ಗಂಗಾವತಿಯಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ್ದ ರೆಡ್ಡಿ, ಎರಡನೇ ದಿನವಾದ ಇಂದು ಮತ್ತೆ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಗಂಗಾವತಿಯ ಹಿರೇಜಂತಕಲ್ ನಲ್ಲಿರುವ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿದ್ರು.
ಇದನ್ನೂ ಓದಿ : – ಕಾಫಿನಾಡಲ್ಲಿ ದತ್ತಜಯಂತಿ ಸಂಭ್ರಮ – ಅನುಸೂಯ ದೇವಿ ದರ್ಶನಕ್ಕೆ ತೆರಳಿದ ಸಾವಿರಾರು ಮಹಿಳೆಯರು