ಎಷ್ಟೇ ಪಕ್ಷಗಳು ಬಂದರೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ – ಆನಂದ್ ಸಿಂಗ್

ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಪ್ರವಾಸೋದ್ಯಮದ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ (koppal)ದಲ್ಲಿ ಪ್ರವಾಸೋದ್ಯಮದ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಜನಾರ್ದನ ರೆಡ್ಡಿ( janardhan reddy ) ನನ್ನ ಆತ್ಮೀಯ ಸ್ನೇಹಿತ. ನಾನು ರಾಜಕೀಯಕ್ಕೆ ಬರಲು ಅವರು ಪ್ರಮುಖ ಕಾರಣ. ನಾವು ಅವರನ್ನು ಮರೆಯಬಾರದು. ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದೆ. 2008 ರಲ್ಲಿ ಅವರೇ ಧೈರ್ಯ ತುಂಬುವ ಕೆಲಸ ಮಾಡಿದ್ದರು.

Ex Leader of BJP and mining mafia Gali Janardan Reddy formed his new  political party in

ಪ್ರಜಾಪ್ರಭುತ್ವದಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ಯಾರಾದರೂ ಸ್ಪರ್ಧೆ ಮಾಡುವ ಸ್ವಾತಂತ್ರ್ಯ ಇದೆ. ಈ ಸಂದರ್ಭದಲ್ಲಿ ಅವರಿಗೆ ಶುಭಕೋರಬಹುದು ಅಷ್ಟೇ. ಬೇರೆ ಏನೂ ಚರ್ಚೆ ಮಾಡುವುದಿಲ್ಲ.ನಮ್ಮ ಸ್ನೇಹ ಯಾವತ್ತೂ ಇರುತ್ತದೆ. ಅವರು ಪಕ್ಷ ಮಾಡಿದರೂ ಸ್ನೇಹ ಇದೆ. ಪಕ್ಷ ಮಾಡದಿದ್ದರೂ ಸ್ನೇಹ ಇದೆ. ಸ್ನೇಹದಲ್ಲಿ ಯಾವುದೇ ಬಿರುಕು ಇಲ್ಲ ಎಂದು ಹೇಳಿದ್ರು. ಇದನ್ನು ಓದಿ : – ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡ್ತಾರೆ – ಸಿಎಂ ಬೊಮ್ಮಾಯಿ

Ex Leader of BJP and mining mafia Gali Janardan Reddy formed his new  political party in

ಜನಾರ್ದನ ರೆಡ್ಡಿ ಮನವೊಲಿಸುವ ವಿಚಾರವಾಗಿ ಮಾತನಾಡಿದ ಅವರು, ನಾನು ಪಕ್ಷದಲ್ಲಿ ಮನಃವೊಲಿಸುವಷ್ಟು ದೊಡ್ಡ ವ್ಯಕ್ತಿಯಲ್ಲ. ಇದೆಲ್ಲ ನಮ್ಮ ಪಕ್ಷದ ವರಿಷ್ಠರಿಗೆ ಗಮನಕ್ಕೆ ಇದೆ. ಅವರಿಗೆಲ್ಲ ಪ್ಲಸ್, ಮೈನಸ್ ಪಾಯಿಂಟ್ ಗಳು ಗೊತ್ತಿದೆ. ಮುಂದೆ ರಾಜ್ಯ, ರಾಷ್ಟ್ರ ನಾಯಕರು ಚರ್ಚೆ ಮಾಡಬಹುದು ಆ ಸಾಲಿನಲ್ಲಿ ನಾನಿಲ್ಲ. ಚುನಾವಣೆಗೆ ಅನೇಕ ಪಕ್ಷಗಳು ಬರುತ್ತಿವೆ. ನಮ್ಮ ಪಕ್ಷದವರು ಏನೇನು ಚದುರಂಗ ಆಟ ಆಡಬೇಕು ಅದನ್ನು ನಮ್ಮ ಪಕ್ಷದವರು ಆಡುತ್ತಾರೆ. ಎಷ್ಟೇ ಪಕ್ಷಗಳು ಬಂದರೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನನಗೆ ಜನಾರ್ದನ ರೆಡ್ಡಿ ಜೊತೆ ಈಗಲೂ ಸ್ನೇಹ ಇದೆ. ಸ್ನೇಹದಲ್ಲಿ ಯಾವುದೇ ಬಿರುಕು ಇಲ್ಲ. ಯಾರಾದರೂ ಸ್ಪರ್ಧೆ ಮಾಡುತ್ತಾರೋ ಅವರಿಗೆ ಅಜೆಂಡಾ ಇರಬೇಕು. ಪಕ್ಷಕ್ಕೆ ಹಿನ್ನೆಲೆ ಇರಬೇಕಾಗುತ್ತದೆ. ಪಕ್ಷದ ಹಿನ್ನಲೆಯಿಂದ ಜನ ಆಯ್ಕೆ ಮಾಡುತ್ತಾರೆ. ಜನರ ತೀರ್ಮಾನವೇ ಅಂತಿಮ ತೀರ್ಮಾನ ಎಂದು ಹೇಳಿದ್ರು.

ಇದನ್ನು ಓದಿ : –  ನ್ಯೂ ಇಯರ್ ದಿನ ನಮ್ಮ ಮೆಟ್ರೋಗೆ 1 ಕೋಟಿಗೂ ಅಧಿಕ ಆದಾಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!