ಚೆಸ್ಕಾಂ ಸಿಬ್ಬಂದಿ (Cescom staff) ಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಲ್ಲು ಎತ್ತಿ ಹಾಕಲು ಮುಂದಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ದೊಡ್ಡಗಾಡಿಗನಹಳ್ಳಿಯಲ್ಲಿ ನಡೆದಿದೆ. ಚೆಸ್ಕಾಂ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕುಮಾರ್ ಎಂಬ ವ್ಯಕ್ತಿಯು ಹಲ್ಲೆಗೆ ಮುಂದಾಗಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಮನೆ ವಿದ್ಯುತ್ ಬಿಲ್ ಕಟ್ಟದೆ ಕುಮಾರ್ ಬಾಕಿ ಉಳಿಸಿಕೊಂಡಿದ್ದರು. ಬಾಕಿ ವಿದ್ಯುತ್ ಬಿಲ್ ಪಾವತಿಸುವಂತೆ ಚೆಸ್ಕಾಂ ಸಿಬ್ಬಂದಿ ತಾಕೀತು ಮಾಡಿದ್ದರು. ಬಿಲ್ ಕಟ್ಟಲ್ಲ ಎಂದು ಕುಮಾರ್ ಹಾಗೂ ಆತನ ಸಹೋದರ ಜಗದೀಶ್ ಅವಾಜ್ ಹಾಕಿದ್ದಾರೆ. ವಿದ್ಯುತ್ ಬಾಕಿ ವಸೂಲಿಗೆ ತೆರಳಿದ್ದ ಪ್ರಮೋದ್, ಅನಂತಕುಮಾರ್, ರಣತುಂಗ ಎಂಬುವರ ಮೇಲೆ ಮನೆ ಮಾಲೀಕ ಕುಮಾರ್ ಕಲ್ಲು ಎತ್ತಿ ಹಾಕಲು ಯತ್ನಿಸಿದ್ದಾರೆ. ಭೂಪನ ಅವಾಜ್, ದರ್ಪದ ದೃಶ್ಯ ಸೆಸ್ಕಾಂ ಸಿಬ್ಬಂದಿ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಸಿಬ್ಬಂದಿಗೆ ದೂರನ್ನು ದಾಖಲಿಸಲಾಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆಗೆ ಯತ್ನದಡಿ ಕುಮಾರ್, ಆತನ ಸಹೋದರ ಜಗದೀಶ್ ಮೇಲೆ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ : – ಬಿಜೆಪಿ ಸರ್ಕಾರ ಭ್ರಷ್ಟಾಚಾರ ಅನ್ನೋ ಬದಲು ಕಾಂಗ್ರೆಸ್ ಭ್ರಷ್ಟಾಚಾರ ಎಂದ ಸಲೀಂ ಅಹಮ್ಮದ್