ನಾಲ್ಕನೇ ದಿನದ ಭಾರತ್ ಜೋಡೋ ( bharth jodo ) ಪಾದ ಯಾತ್ರೆ ಪಾಂಡವಪುರ ( pandavapura ) ದಲ್ಲಿ ಇಂದು ಅಂತ್ಯವಾಗಿದೆ. ನಂತರ ಮಾತನಾಡಿದ ರಾಹುಲ್ ಗಾಂಧಿ ( rahul gandhi ) ಬೆಳಗ್ಗಿನಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಕ್ಕೆ ಧನ್ಯವಾದಗಳು.
ಹಿಂದೂಸ್ತಾನದಲ್ಲಿ ಕಾಡುತ್ತಿರುವ ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆ ಕುರಿತು ಪಾದಯಾತ್ರೆ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ಭ್ರಷ್ಟಾಚಾರ ಸರ್ಕಾರ ಇದೆ. ರೈತರಿಂದ, ಸಣ್ಣ ವ್ಯಾಪಾರಿಗಳು, ಉದ್ಯೋಗಿಗಳಿಂದ 40% ಕಮಿಷನ್ ಪಡೆಯುತ್ತಿದ್ದಾರೆ. ಇದನ್ನೂ ಓದಿ :- PFI ಭಾಗ್ಯ ಎಂಬ ಪೋಸ್ಟರ್ ಬಿಡುಗಡೆ ಮಾಡಿದ ಸಚಿವ ಆರ್. ಅಶೋಕ್
ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಕಮಿಷನ್ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಬರೆದ್ರು ಕ್ರಮ ಕೈಗೊಳ್ಳಲಿಲ್ಲ. ಈ ಯಾತ್ರೆ ಕನ್ಯಾಕುಮಾರಿ ( kanya kumari )ಯಿಂದ ಕಾಶ್ಮೀರದವರೆಗೆ 3570 ಕಿಮೀ ನಡೆಯುತ್ತಿದೆ. ಈ ಪಾದಯಾತ್ರೆಯಲ್ಲಿ ನಮ್ಮ ಜೊತೆ ಹೆಜ್ಜೆ ಹಾಕುತ್ತಿರುವ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ವಿಜಯದಶಮಿ ಹಾಗೂ ಆಯುಧ ಪೂಜೆಯ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ :- ಮತ್ತೆ ರಾಜ್ಯ ಬಿಜೆಪಿ ಸರ್ಕಾರದ ಮಾನ ಹರಾಜು ಹಾಕಿದ ಉದ್ಯಮಿ ಮೋಹನ್ ದಾಸ್ ಪೈ !