ಗುಜರಾತ್ ನಲ್ಲಿ (Gujarat) ಆಮ್ ಆದ್ಮಿ ಪಕ್ಷಕ್ಕೆ (AAP) ಬಿಜೆಪಿ (BJP) ಫಂಡ್ ಮಾಡಿದೆ. ಕಾಂಗ್ರೆಸ್ನ ಓಟ್ ವಿಭಜನೆ ಮಾಡುವ ಸಲುವಾಗಿ ಬಿಜೆಪಿ ಆಪ್ ಗೆ ಹಣ ನೀಡಿದೆ. ಇದರಿಂದ ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಕಾಂಗ್ರೆಸ್ಗೆ ಹಿನ್ನಡೆ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಬಗ್ಗೆ ನಮಗೆ ಮೊದಲೇ ನಿರೀಕ್ಷೆಯಿತ್ತು. ಏಕೆಂದರೆ ಆಪ್ ನಮ್ಮ ವೋಟ್ಗಳನ್ನು ತಿನ್ನುತ್ತಿದೆ. ಆಪ್ ಪಡೆದಿರುವ ಮತಗಳೆಲ್ಲವೂ ಕಾಂಗ್ರೆಸ್ಗೆ ಸೇರಿದ್ದು. ಆದರೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ಹಾಗಾಗುತ್ತಿಲ್ಲ. ಅಲ್ಲಿ ನಾವೇ ಮುಂದಿದ್ದೇವೆ ಎಂದು ಹೇಳಿದರು.
ಗುಜರಾತ್ನಲ್ಲಿ ಆಪ್ ಮಾಡಿರುವ ತಂತ್ರಗಾರಿಕೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ. ಇಲ್ಲಿ ಬಿಜೆಪಿ ಜೆಡಿಎಸ್ ಜೊತೆ ಸೇರಿ ಇಂತಹ ತಂತ್ರಗಾರಿಕೆ ಮಾಡಬಹುದು. ಆದರೆ ಅದು ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ರು. ಇದನ್ನು ಓದಿ : – Gujarat Election Results- ಗುಜರಾತ್ ನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ, ಕಾಂಗ್ರೆಸ್ ದಾಖಲೆ ಪುಡಿಪುಡಿ
ನಾವು ಸುಮ್ಮನಿದ್ದರೂ ಕರ್ನಾಟಕ ಗೆಲ್ತೀವಿ…
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಕರ್ನಾಟಕದ ಮೇಲೂ ಪ್ರಭಾವ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ( SIDDARAMAIAH )ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯಕ್ಕೆ ಪ್ರಭಾವ ಬೀಳಲು ಸಾಧ್ಯವಿಲ್ಲ. ಆಯಾಯ ರಾಜ್ಯಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತವೆ. ಇಲ್ಲಿ ಬಿಜೆಪಿ ಭ್ರಷ್ಟ ಸರ್ಕಾರ ನಡೆಸುತ್ತಿದ್ದರೆ, ಕಾಂಗ್ರೆಸ್ ತುಂಬಾ ಗಟ್ಟಿಯಾಗಿ ನಿಂತಿದೆ. ನಾವು ಕರ್ನಾಟಕದಲ್ಲಿ ಸುಮ್ಮನೆ ಇದ್ದರೂ ಗೆಲ್ಲುವ ತಾಕತ್ತು ನಮ್ಮಲ್ಲಿದೆ. ನಮಗೆ ಯಾವುದೇ ತಂತ್ರಗಾರಿಕೆ ಮಾಡುವ ಅಗತ್ಯವೇ ಇಲ್ಲ ಎಂದು ತಿರುಗೇಟು ನೀಡಿದರು.
Gujarat Election Results- ಗುಜರಾತ್ ನಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ, ಕಾಂಗ್ರೆಸ್ ದಾಖಲೆ ಪುಡಿಪುಡಿ
ಇದನ್ನು ಓದಿ : – ಗುಜರಾತ್ ನಲ್ಲಿ ಸತತ ಏಳನೇ ಬಾರಿ ಬಿಜೆಪಿಗೆ ಅಧಿಕಾರದ ಗದ್ದುಗೆ – ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ