ಸಾಂಸ್ಕೃತಿಕ ನಗರಿಯಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡ್ತಿದ್ದಾರೆ .ಟಿಪ್ಪು ಪರ ನಿಂತವರು ಯಾರೂ ಉದ್ಧಾರವಾಗಿಲ್ಲ ಎಂದು ಬಿಜೆಪಿ ಮುಖಂಡ ಎಚ್.ಜಿ. ಗಿರಿಧರ್ (Hg.Giridhar) ಹೇಳಿದ್ದಾರೆ. ಮೈಸೂರಿ (Mysuru) ನಲ್ಲಿ ಮಾತನಾಡಿದ ಅವರು ಟಿಪ್ಪುಗೆ ಅಸಂಖ್ಯಾತ ಹಿಂದೂಗಳ ಶಾಪವಿದೆ. ಟಿಪ್ಪು ಪರ ನಿಂತವರಿಗೂ ಆ ಶಾಪ ತಟ್ಟದೇ ಇರಲ್ಲ. ತನ್ವೀರ್ ಸೇಠ್ (Tanveer sait) ಗೆ ತಾಕತ್ತಿದ್ದರೆ ಟಿಪ್ಪು ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿ ನೋಡಲಿ.
ಮುಂಬರುವ ಚುನಾವಣೆಯಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿ, ರಾಜಕೀಯ ಜೀವನವೇ ಪತನಾಗುತ್ತೆ ಎಂದು ಹೇಳೀದ್ರು. ಟಿಪ್ಪು ಧಾರಾವಾಹಿ ತೆಗೆಯಲು ಹೋದಾಗ ಪ್ರೀಮಿಯರ್ ಸ್ಟುಡಿಯೋದಲ್ಲಿ ಅಗ್ನಿ ದುರಂತವೇ ನಡೆದು ಹೋಯಿತು. ಸಂಜಯ್ ಖಾನ್ ಬದುಕಿದ್ದೇ ಹೆಚ್ಚಾಯಿತು. ಟಿಪ್ಲು ಸುಲ್ತಾನ್ ಖಡ್ಗವನ್ನು ಲಂಡನ್ ಮ್ಯೂಸಿಯಂನಿಂದ ತಂದ ವಿಜಯ್ ಮಲ್ಯ ದೇಶ ಭ್ರಷ್ಟರಾಗಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡುವ ಹಠಕ್ಕೆ ಬಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದ ಹೀನಾಯ ಸೋಲು ಅನುಭವಿಸಿದರು. ಇದೆಲ್ಲವನ್ನೂ ತನ್ವೀರ್ ಸೇಠ್ ಗೆ ಮತ್ತೊಮ್ಮೆ ನೆನಪು ಮಾಡುತ್ತಿದ್ದೇನೆ. ಕೆಂಪೇಗೌಡರಿಗೆ ಟಿಪ್ಪು ಹೋಲಿಸುವುದು ಮೂರ್ಖತನದ ಪರಮಾವಧಿ ಎಂದು ತಿಳಿಸಿದ್ರು. ನಾಡಪ್ರಭು ಕೆಂಪೇಗೌಡರ ಕಾಲ ಧೂಳಿಗೂ ಟಿಪ್ಪು ಸಮನಲ್ಲ.ಕೆಂಪೇಗೌಡರು ನಾಡು ಕಟ್ಟಿ ಜನ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿದ ಶ್ರೇಷ್ಠ ವ್ಯಕ್ತಿ. ಕೆಂಪೇಗೌಡರ ಕಾರ್ಯಗಳ ಬಗ್ಗೆ ಜನ ಕೊಂಡಾಡುತ್ತಾರೆ. ಟಿಪ್ಪು ಮಾಡಿದ ಮತಾಂತರ, ಕ್ರೌರ್ಯವನ್ನು ಹಿಂದೂಗಳು ಇಂದಿಗೂ ಮರೆತಿಲ್ಲ. ಇದನ್ನೂ ಓದಿ : – ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ – ಸಚಿವ ಶ್ರೀರಾಮುಲು
ಟಿಪ್ಪು ಪ್ರತಿಮೆ ಮಾಡಲು ಮುಂದಾಗಿರೋ ತನ್ವೀರ್ ಸೇಠ್ ನನ್ನು ಮುಸ್ಲಿಂ ಮೌಲ್ವಿಗಳೇ ಬಹಿಷ್ಕಾರ ಹಾಕಬೇಕು . ಇಸ್ಲಾಂ ಧರ್ಮದ ನೀತಿ ವಿರುದ್ದ ಪ್ರತಿಮೆ ಮಾಡಲು ಹೊರಟ ಇವರು ಮುಸ್ಲಿಮರಿಗೂ ಒಳ್ಳೆಯದು. ನರಸಿಂಹರಾಜ ಕ್ಷೇತ್ರವನ್ನು ಮಿನಿ ಪಾಕಿಸ್ತಾನ ಮಾಡಿದ ಕೀರ್ತಿ ತನ್ವೀರ್ ಸೇಠ್ ಗೆ ಸಲ್ಲುತ್ತದೆ ಎಂದು ಆರೋಪಿಸಿದ್ರು. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಸ್ಲಂಗಳಿರುವ ಕ್ಷೇತ್ರ ಎಂಬ ಅಪಖ್ಯಾತಿ ಬರಲು ತನ್ವೀರ್ ಕಾರಣ. ಅಸಂಖ್ಯಾತ ಹಿಂದೂಗಳ ಶಾಪವಿರೋ ಟಿಪ್ಪು ಪರ ನಿಂತಿರೋ ತನ್ವೀರ್ ಸೇಠ್ ಗೆ 2023ರ ಚುನಾವಣೆಯಲ್ಲಿ ಹೀನಾಯ ಸೋಲು ನಿಶ್ಚಿತ ಎಂದು ಎಚ್.ಜಿ. ಗಿರಿಧರ್ ಶಾಸಕ ತನ್ವೀರ್ ಸೇಠ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : – ಚುನಾವಣೆ ಟಿಕೆಟ್ ಸಿಗದಿದ್ದಕ್ಕೆ ವಿದ್ಯುತ್ ಟವರ್ ಏರಿದ AAP ಮುಖಂಡ