ಮಂಗಳೂರು (Mangaluru) ಬಾಂಬ್ ಬ್ಲಾಸ್ಟ್ ಪ್ರಕರಣದ ಬಳಿಕ ಮೈಸೂರ (Mysuru) ಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ. ಮುಖ್ಯರಸ್ತೆ, ವೃತ್ತಣ ಸರ್ಕಾರಿ ಕಟ್ಟಡಗಳಿಗೆ ಭದ್ರತೆ ಒದಗಿಸಲಾಗಿದೆ.
ಅರಮನೆ (Palace) , ಮೃಗಾಲಯ, ಸಂತ ಫಿಲೋಮಿನಾ ಚರ್ಚ್ ( St Philomina church) ಸೇರಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಭದ್ರತೆ ಆಯೋಜನೆ ಮಾಡಲಾಗಿದೆ. ಮೈಸೂರು ನ್ಯಾಯಾಲಯಗಳು, ಡಿಸಿ ಕಚೇರಿ ಬಳಿಯೂ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬಾಂಬ್ ಪತ್ತೆದಳ, ಶ್ವಾನದಳದಿಂದ ತೀವ್ರ ತಪಾಸಣೆ ನಡೆದಿದೆ. ಪಾರ್ಕಿಂಗ್ ಸ್ಥಳಗಳು, ಬೈಕ್, ಕಾರುಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಅನುಮಾನಸ್ಪದ ವ್ಯಕ್ತಿ, ವಸ್ತುಗಳನ್ನು ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಉದಯಗಿರಿ, ರಾಜೀವ್ ನಗರ, ಶಾಂತಿನಗರದಲ್ಲೂ ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನೂ ಓದಿ : – Breaking News ಹಾಲಿನ ದರ ಲೀಟರ್ ಗೆ ಎರಡು ರೂಪಾಯಿ ಏರಿಕೆ