ಮೋದಿ ಸಹೋದರನ ಕಾರು ಅಪಘಾತ..! ಆತಂಕ ಪಡುವ ಅಗತ್ಯವಿಲ್ಲ ಎಂದ ವೈದ್ಯರು

ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜೆ.ಎಸ್.ಎಸ್. ಮೆಡಿಕಲ್ ಸೂಪರಿಡೆಂಟ್ ಡಾ. ಮಧು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ( NAREDRA MODI ) ಸಹೋದರನ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜೆ.ಎಸ್.ಎಸ್. ಮೆಡಿಕಲ್ ಸೂಪರಿಡೆಂಟ್ ಡಾ. ಮಧು ಸ್ಪಷ್ಟಪಡಿಸಿದ್ದಾರೆ.

ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಮ್ಮಗ 6 ವರ್ಷದ ಬಾಲಕನ ತಲೆಯ ಎಡಭಾಗದ ಎಲುಬಿಗೆ ಪೆಟ್ಟಾಗಿದೆ. ಅವರೊಬ್ಬರಿಗೆ ಮಾತ್ರ ಹೆಚ್ಚು ಗಾಯಗಳಾಗಿತ್ತು. ಎಲ್ಲರಿಗೂ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಯಾವುದೇ ಆತಂಕಪಡುವಂತಹ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ. ನಾವು ಪ್ರಧಾನಿ ಸಹೋದರ ಕುಟಂಬ ಎಂದು ಗೊತ್ತಾಗುತ್ತಿದ್ದಂತೆ ಅತೀ ಹೆಚ್ಚು ಕಾಳಜಿ ವಹಿಸಿ ಚಿಕಿತ್ಸೆ ನೀಡಿದ್ದೇವೆ ಎಂದು ,ಸ್ಪಷ್ಟಪಡಿಸಿದ್ರು.  ಇದನ್ನು ಓದಿ : –  ಭಾರತದ ಒಡಿಶಾದಲ್ಲಿ ರಷ್ಯಾದ ಶ್ರೀಮಂತ ಸಂಸದ ಆಂಟೊನೊವ್ ನಿಗೂಢ ಸಾವು..!

ಆಸ್ಪತ್ರೆಗೆ ಸಂಸದ ಪ್ರತಾಪಸಿಂಹ ಭೇಟಿ

ಸುದ್ದಿ ತಿಳಿಯುತ್ತಿದ್ದಂತೆ ಅಸ್ಪತ್ರೆಗೆ ಸಂಸದ ಪ್ರತಾಪಸಿಂಹ ( PRATHAP SIMHA ) ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಸಹೋದರನ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಮಾತನಾಡಿದ ಅವರು ಎಲ್ಲರೂ ಆರಾಮವಾಗಿ ಇದ್ದಾರೆ. ದೇವರ ದಯೆಯಿಂದ ಯಾವುದೇ ಅಪಾಯವಾಗಿಲ್ಲ. ಮೋದಿ ಸಹೋದರ ಪ್ರಹ್ಲಾದ್ ಮೋದಿಯವರ ಮುಖದ ಭಾಗಕ್ಕೆ ತರಚಿದ ಗಾಯಗಳಾಗಿವೆ. ಮೊಮ್ಮಗನಿಗೆ ತಲೆ ಹಾಗೂ ಕಾಲಿನ ಬಳಿ ಗಾಯವಾಗಿದೆ. ಎಲ್ಲರೂ ಕ್ಷೇಮದಿಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ : – ಪ್ರಧಾನಿ ಮೋದಿ ಭೇಟಿಯಾದ ಕೇರಳ ಸಿಎಂ ಪಿಣರಾಯಿ ವಿಜಯನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!