ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಿದೆ. JDS ಸದಸ್ಯರು ಬಿಜೆಪಿಯ ಶಿವಕುಮಾರ್ ಪರ ಮತ ಚಲಾಯಿಸಿದ್ದಾರೆ. ಬಿಜೆಪಿ ಸದಸ್ಯ ಶಿವಕುಮಾರ್ ಪರ 48 ಮತಗಳ ಚಲಾವಣೆ ಮಾಡಿದ್ದಾರೆ. ಮೈಸೂರು ನಗರ ಪಾಲಿಕೆ ಮೇಯರ್ ಆಗಿ ಶಿವಕುಮಾರ್ ಆಯ್ಕೆ ಮಾಡಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ JDS ಶಾಸಕ ಜಿ.ಟಿ.ದೇವೇಗೌಡ, ಪರಿಷತ್ನ JDS ಸದಸ್ಯ ಮರಿತಿಬ್ಬೇಗೌಡ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಕಾಂಗ್ರೆಸ್ನಿಂದ (Congress Party) ಮೇಯರ್ ಸ್ಥಾನಕ್ಕೆ ಸಯ್ಯದ್ ಅಸ್ರತ್ ಉಲ್ಲಾ ಹಾಗೂ ಗೋಪಿ, ಜೆಡಿಎಸ್ನಿಂದ (JDS) ಕೆ.ವಿ.ಶ್ರೀಧರ್, ಬಿಜೆಪಿಯಿಂದ (BJP) ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್ನಿಂದ ಶೋಭಾ ಸುನಿಲ್, ಜೆಡಿಎಸ್ನಿಂದ ರೇಷ್ಮಾಬಾನು, ಬಿಜೆಪಿಯಿಂದ ರೂಪ ನಾಮಪತ್ರ ಸಲ್ಲಿಸಿದ್ದರು.ಬಿಜೆಪಿಯ ರೂಪ ಪರ ಮತ ಚಲಾಯಿಸಿದ ಜೆಡಿಎಸ್ ಸದಸ್ಯರಿಂದ ಮೈಸೂರು ಮೇಯರ್ ಉಪ ಮೇಯರ್ ಎರಡು ಸ್ಥಾನ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ ಶಿವಕುಮಾರ್ ಉಪಮೇಯರ್ ಆಗಿ ರೂಪ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ : – ಬೆಂಗಳೂರಿನ ಸ್ಥಿತಿ ನೋಡಿದ್ರೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ – ಡಿ.ಕೆ ಸುರೇಶ್
ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಆಘಾತ ನೀಡಿದೆ. ಜೆಡಿಎಸ್ ಜೊತೆ ಮೈತ್ರಿ ಇಲ್ಲ ಇಲ್ಲ ಎಂದು ಹೇಳುತ್ತಲ್ಲೇ ಕಾಂಗ್ರೆಸ್ಗೆ ಯಾಮಾರಿಸಿದ್ದ ಬಿಜೆಪಿ. ಬಿಜೆಪಿಯ ಒಳ ತಂತ್ರ ಅರಿಯದೆ ಕಾಂಗ್ರೆಸ್ ಮೇಯರ್ ಆಗುವ ಕನಸು ಕಂಡಿತ್ತು. ಕಾಂಗ್ರೆಸ್ ಗೆ ಕೊನೆ ಕ್ಷಣದಲ್ಲಿ ಭಾರಿ ನಿರಾಸೆ ಆಗಿದೆ.
ಇದನ್ನೂ ಓದಿ : – ಉದ್ಯೋಗ ಕೊಟ್ಟು ಜೀವನ ಕೊಡುವ ಬೆಂಗಳೂರು ಮುಳುಗುತ್ತಿದೆ – ಕೃಷ್ಣ ಬೈರೇಗೌಡ