ಮೈಸೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪವಿತ್ರಾ ಲೋಕೇಶ್

ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ (PAVITHRA LOKESH ) ಅವರ ವೈಯಕ್ತಿಕ ಜೀವನದ ಕುರಿತಾಗಿ ಅಂತೆ-ಕಂತೆ ಕಥೆಗಳು ಕೇಳಿ ಬರುತ್ತಿವೆ.

ಅದರಲ್ಲೂ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗಿದೆ. ಅವರು ತೆಲುಗಿನ ಖ್ಯಾತ ನಟ ನರೇಶ್ (NAREESH ) ಅವರೊಂದಿಗೆ ಮದುವೆ ಕೂಡ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಬರೆಯಲಾಗುತ್ತಿದೆ ಎಂದು ಮೈಸೂರಿನಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪವಿತ್ರಾ ಲೋಕೇಶ್ ಅವರ ಹೆಸರಿನಲ್ಲೂ ಕೆಲವರು ನಕಲಿ ಖಾತೆಗಳನ್ನು ತೆರೆದಿದ್ದಾರಂತೆ. ಇದನ್ನೂ ಓದಿ :- ಹಿರಿಯ ನಟಿ ಪವಿತ್ರಾ ಲೋಕೇಶ್ ಮತ್ತೊಂದು ಮದುವೆಯಾಗಿದ್ದಾರಂತೆ…!

ಆ ಖಾತೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಪತಿ ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಲೋಕೇಶ್ ಇಲ್ಲವೆಂದು , ನರೇಶ್ ಅವರ ಜೊತೆ ಲೀವ್ ಇನ್ ಸಂಬಂಧ ಹೊಂದಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರಂತೆ. ಈ ಕುರಿತೂ ಅವರ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ. ಮೈಸೂರಿನ ಸೈಬರ್ ಪೊಲೀಸರು ಎಫ್ಐಆರ್ (FIR ) ದಾಖಲಿಸಿದ್ದಾರೆ.

ಇದನ್ನೂ ಓದಿ :- ಜೂ.23ಕ್ಕೆ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಟ್ರೈಲರ್ ಬಿಡುಗಡೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!