ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಬಾಯಿಗೆ ಬಂದಾಗೆ ಮಾತಾಡುತ್ತಾರೆ. ನಮ್ಮ ಹುಡುಗ ಪೇ ಸಿಎಂ ( pay cm ) ಟಿ ಶರ್ಟ್ ಹಾಕಿಕೊಂಡಿದ್ದಕ್ಕೆ ಹೊಡೆದಿದ್ದಾರೆ. ನಾಳೆ ನಾನು, ಸಿದ್ದರಾಮಯ್ಯ ಹಾಕಿಕೊಳ್ಳುತ್ತೇವೆ. ಹೊಡೆದು ಬಿಡ್ತಾರಾ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ನಂಜನಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( d. k shivkuamar ) ಹೇಳಿದ್ದಾರೆ. ನಮ್ಮ ಮೇಲೂ ಅವರು ಪೋಸ್ಟರ್ ಮಾಡಿದರು. ಅವರ ಮೇಲೆ ಕೇಸ್ ಹಾಕಿದ್ರಾ ಎಂದು ಪ್ರಶ್ನೆ ಮಾಡಿದ್ರು.
ಅದ್ಬುತವಾದ ಬೆಳವಣಿಗೆ ದೇಶದಲ್ಲಿ ಆಗುತ್ತಿದೆ. ಭಾರತ್ ಐಕ್ಯತಾ ಯಾತ್ರೆ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಭಾರತದಲ್ಲಿ ಆಗುತ್ತಿರುವ ವೈಮನಸ್ಸಿಗೆ ಉತ್ತರ ಕಂಡುಹಿಡಿಯುವ ಕೆಲಸಮಾಡುತ್ತಿದ್ದೇವೆ ಎಂದು ೪೦% ಕಮಿಷನ್ ಆರೋಪ ನಾವು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘ ಹೇಳಿದ್ದನ್ನು ಜನರ ಮುಂದೆ ಇಟ್ಟಿದ್ದೇವೆ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ. ಜೊತೆಗೆ ಭ್ರಷ್ಟಾಚಾರ ಹೆಚ್ಚಾಗಿದೆ. ನಿರುದ್ಯೋಗ ಬಗ್ಗೆ ಮಾಧ್ಯಮಗಳೆ ಹೇಳಿದ್ದು. ಈಗ ಭಯದ ವಾತವರಣದಲ್ಲಿ ನಾವು ಬದಕುತ್ತಿದ್ದೇವೆ. ದ್ವೇಷ ಅಸೂಹೆ ಹೋಗಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಒಂದು ಮಾಧ್ಯಮ ದೊಡ್ಡ ಜಾಹಿರಾತು ಕೊಟ್ಟಿದೆ. ನಮ್ಮ ಬೆಳವಣಿಗೆ ಸಹಿಸದೆ ದೊಡ್ಡ ಜಾಹಿರಾತು ಕೊಟ್ಟಿದ್ದಾರೆ. ಇದಕ್ಕೆ ಜಗ್ಗಲ್ಲ,ಬಗ್ಗಲ್ಲ ನಮ್ಮ ಕೆಲಸ ನಾವು ಮಡುತ್ತೇವೆ. ಜನರ ಧ್ವನಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ರು.
ಇದನ್ನೂ ಇದಿ : – ಕಳ್ಳ ದಾರಿಯಲ್ಲಿ ವಿದೇಶದಿಂದ ಐಫೋನ್ ಸ್ಮಗ್ಲಿಂಗ್ ಪತ್ತೆ ಮಾಡಿದ ಕಸ್ಟಮ್ಸ್ ಅಧಿಕಾರಿಗಳು