ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ – ಸೆ.16 ರಿಂದ 9 ದಿನಗಳ ಕಾಲ ದಸರಾ ಯುವ ಸಂಭ್ರಮ

ವಿಶ್ವವಿಖ್ಯಾತ ಮೈಸೂರು ( mysore ) ದಸರಾ ಮಹೋತ್ಸವ 2022ರ ಹಿನ್ನೆಲೆ ಸೆ.16ರಿಂದ 9 ದಿನಗಳ ಕಾಲ ಮಾನಸಗಂಗೋತ್ರಿ ( manasagangothri ) ಯ ಬಯಲು ರಂಗಮಂದಿರದಲ್ಲಿ ದಸರಾ ( dasara ) ಯುವ ಸಂಭ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರನಟ ಡಾಲಿ ಧನಂಜಯ್ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಯುವ ಸಂಭ್ರಮದಲ್ಲಿ 250 ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಪ್ರತಿದಿನ ಸಂಜೆ 5:30ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭಾ ಪ್ರದರ್ಶನವಾಗಲಿದ್ದು, 9 ವಿಷಯಾಧಾರಿತವಾಗಿ ಕಾರ್ಯಕ್ರಮಗಳು ನಡೆಯಲಿವೆ. 75ನೇ ವರ್ಷದ ಅಮೃತೋತ್ಸವ ಭಾರತ ಸ್ವಾತಂತ್ರ್ಯ ಚಳುವಳಿ, ಮಹಿಳಾ ಸಬಲೀಕರಣ, ಕನ್ನಡ ಸಂಸ್ಕೃತಿ, ಪರಿಸರ, ಸ್ವಚ್ಚ ಭಾರತ ಮತ್ತು ಮೈಸೂರು ಮಹಾರಾಜರ ಕೊಡುಗೆ ಸೇರಿ 9 ವಿಷಯ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ : – ಕನ್ನಡ ಬಿಟ್ಟು ಇತರೆ ಯಾವುದೇ ಭಾಷೆ ಬೇಡ – ವಾಟಾಳ್ ನಾಗರಾಜ್


ಯುವ ಸಂಭ್ರಮ ಕಾರ್ಯದಲ್ಲಿ ಮೈಸೂರು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಬಹುತೇಕ ವಿವಿಯ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. 18 ತಂಡಗಳಿಗೆ ಯುವದಸರಾ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಯುವ ಸಂಭ್ರಮ ವೀಕ್ಷಿಸಲು ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ. ಎಂದು ಕಾರ್ಯಕ್ರಮ ಉಸ್ತುವಾರಿ ಮೈಸೂರು ಎಸ್ಪಿ ಆರ್.ಚೇತನ್ ಮಾಹಿತಿ ನೀಡಿದ್ದಾರೆ.

https://youtu.be/iePjZi3f2H0

ಇದನ್ನೂ ಓದಿ : –  ಮಳೆ ಹಾನಿ ಪರಿಶೀಲನೆ- ಕೇಂದ್ರ ತಂಡ ‘ಬಂದ ಪುಟ್ಟ ಹೋದ ಪುಟ್ಟ’- ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!