ಹುಬ್ಬಳ್ಳಿ (Hubballi ) ನಗರದ ಪ್ರಮುಖ ಬೀದಿಗಳಲ್ಲಿ ಶಿಸ್ತಿನ ಸಿಪಾಯಿಗಳು ಸಂಚರಿಸುತ್ತಿದ್ದಾರೆ. ನೆಹರೂ ಮೈದಾನದಿಂದ ಪಥ ಸಂಚಲನ ಆರಂಭವಾಗಿದೆ. ಪಥ ಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahalad joshi) , ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadeesh sheeter) ಪಾಲ್ಗೊಂಡಿದ್ದಾರೆ.
ಸಾವಿರಾರು RSS ಕಾರ್ಯಕರ್ತರು ಗಣವೇಶ ತೊಟ್ಟು ನಗರ ಪ್ರದಕ್ಷಿಣೆ ಹಾಕಿದ್ದಾರೆ. ಪಥ ಸಂಚಲನದ ಬಳಿಕ ನೆಹರೂ ಮೈದಾನದಲ್ಲಿ ಸಭೆ ನಡೆಯಲಿದೆ. ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಕ ನಾ. ತಿಪ್ಪೇಸ್ವಾಮಿ ಭಾಷಣ ಮಾಡಲಿದ್ದಾರೆ. ನೆಹರು ಮೈದಾನ , ಕೃಷ್ಣ ಭವನ, ಕಂಬಳಿ ಮಾರ್ಗ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆ, ಶ್ರೀ ತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿ, ಶ್ರೀ ಶಂಕರ ಮಠ, ಕಂಚಗಾರಗಲ್ಲಿ, ಹಿರೆಪೇಟೆ, ಸರಾಫ್ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ, ದುರ್ಗದ ಬೈಲ್ ಮಾರ್ಗವಾಗಿ ಪಥ ಸಂಚಲನ ಸಂಚರಿಸಲಿದೆ.
ಇದನ್ನೂ ಓದಿ :- ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮೀಸಲಾತಿ ಹೆಚ್ಚಿಸಬಹುದಿತ್ತು – ನಾರಾಯಣಸ್ವಾಮಿ