ಕಲುಷಿತ ನೀರಿಗೆ (Contaminated water) ನಾಲ್ಕನೇ ವ್ಯಕ್ತಿ ಬಲಿಯಾಗಿರುವ ಘಟನೆ ರಾಯಚೂರು (Raichur) ಜಿಲ್ಲೆಯ ಅಂದ್ರೂನ್ ಕಿಲ್ಲಾದಲ್ಲಿ ನಡೆದಿದೆ. ಅಬ್ದುಲ್ ಕರೀಂ(Abdul kareem) (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ .
ಅಬ್ದುಲ್ ಕರೀಂ ವಾರ್ಡ್ ನಂಬರ್ 8 ಅಂದ್ರೂನ್ ಖಿಲ್ಲಾ ನಿವಾಸಿಯಾಗಿದ್ದಾನೆ . ಮೃತ ಕರೀಂ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು .ಕಲುಷಿತ ನೀರು ಸೇವನೆ ಹಿನ್ನೆಲೆಯಲ್ಲಿ ಮೂರು ದಿನದ ಹಿಂದೆ ಅಬ್ದುಲ್ ಕರೀಂನನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದರು . ಕರೀಂ ವಾಂತಿ ಹಾಗೂ ಭೇದಿಯಿಂದ ಬಳಲುತ್ತಿದ್ದನು . ಕಲುಷಿತ ನೀರಿನಿಂದ ಕಿಡ್ನಿ (kidney) ಮೇಲೆ ಪರಿಣಾಮ ಬೀರಿದೆ . ಇದೇ ಕಾರಣಕ್ಕೆ ಕಿಡ್ನಿ ಫೆಲ್ಯೂರ್ ಆಗಿರೊ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ . ಇದನ್ನೂ ಓದಿ : – ಜಮೀನು ಜಗಳ – ಕೊಲೆಯಲ್ಲಿ ಅಂತ್ಯ