ಸೋರುತಿಹುದು ಕಾಂಗ್ರೆಸ್ ಮನೆಯ ಮಾಳಿಗೆ – ಸಚಿವ ಆರ್.ಅಶೋಕ್ ವ್ಯಂಗ್ಯ

ರಾಯಚೂರು ( raichuru ) ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ( r. ashok ) ಗ್ರಾಮ ವಾಸ್ತವ್ಯ ಹೂಡಲಿದ್ದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಯಚೂರು ( raichuru ) ಜಿಲ್ಲೆ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ( r. ashok ) ಗ್ರಾಮ ವಾಸ್ತವ್ಯ ಹೂಡಲಿದ್ದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಇಲಾಖೆಯ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಸದ್ಯ ಈ ಬಗ್ಗೆ ಮಾತನಾಡಿರುವ ಆರ್ ಅಶೋಕ್, ಕಳೆದ 2 ವರ್ಷದಿಂದ ಗ್ರಾಮ ವಾಸ್ತವ್ಯ ಮಾಡ್ತಿದ್ದೇನೆ. ಜನರ ಜೊತೆ ಕೂತು ಮಾತನಾಡಿದರೆ, ಮನೆ ಬಾಗಿಲಿಗೆ ಪರಿಹಾರ ಸಿಗತ್ತೆ. ಲಂಬಾಣಿ ತಾಂಡಾ, ಕುರುಬರ ಹಟ್ಟಿ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರಿಂದ ಅವುಗಳನ್ನ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಕಲ್ಯಾಣ ಕರ್ನಾಟಕದ 60 ಸಾವಿರ ಜನಕ್ಕೆ, ಸ್ಪಾಟ್ ನಲ್ಲೇ ಹಕ್ಕು ಪತ್ರ ನೀಡುತ್ತೇವೆ. ರಾಜ್ಯಾದ್ಯಂತ 1.5 ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತೆ ಎಂದು ಹೇಳಿದ್ರು. ಇದನ್ನೂ ಓದಿ :-  ಸ್ಟೀಲ್ ಬ್ರಿಡ್ಜ್ ಗೆ ಬಿಜೆಪಿಯವರೇ ವಿರೋಧಿಸಿದ್ರು – ಹೆಚ್.ಡಿ ಕುಮಾರಸ್ವಾಮಿ


ಇದೇ ವೇಳೆ ‘ಜೋಡೋ’ ಯಾತ್ರೆ ಕುರಿತು ಸಚಿವ ಅಶೋಕ್ ಲೇವಡಿ ಮಾಡಿದ್ದಾರೆ. ಫ್ಯಾಮಿಲಿ ಪ್ಯಾಕ್ ಪಾದಯಾತ್ರೆ, ಫ್ಯಾಮಿಲಿ ಪ್ಯಾಕ್ ಯಾತ್ರೆ. ಸಿದ್ದರಾಮಯ್ಯ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದರು. ಸಿದ್ದರಾಮಯ್ಯ ಪಾದಯಾತ್ರೆಗೆ ಸೋನಿಯಾ ಬಂದಿದ್ರಾ…? ಬಂಡೆ ಅಂತೀರಲ್ಲ ಅವರು ಪಾದಯಾತ್ರೆ ಮಾಡಿದರು. ಡಿ.ಕೆ.ಶಿವಕುಮಾರ್ ಪಾದಯಾತ್ರೆಗೆ ಯಾರು ಬಂದ್ರು…? ಹಸು, ಕರು ಗುರುತು ಮತ್ತೆ ಬಂದಿದೆ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ. ಸೋರುತಿಹುದು ಕಾಂಗ್ರೆಸ್ ( congress ) ಮನೆಯ ಮಾಳಿಗೆ. ಒಂದು ದಿನ ಫ್ಯಾಮಿಲಿ ಬಿಟ್ಟು ಜನರ ಜೊತೆಗೆ ನಿಂತಿಲ್ಲ. ಅವರ ಕಾಲದ 20 ಸಚಿವರು ಕೇಸ್ ನಲ್ಲಿ ಅಲೆದಾಡ್ತಿದ್ದಾರೆ. ಡೀಲ್ ಮಾಸ್ಟರ್ ಗಳಿವ್ರು ಎಂದು R.ಅಶೋಕ್ ವಾಗ್ದಾಳಿ ನಡೆಸಿದ್ರು.


ದಲಿತರ ಮನೆಯಲ್ಲಿ ಬಿಜೆಪಿ ನಾಯಕರು ಊಟ ಸೇವಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಜಾತಿ ಪದ್ಧತಿ ಹೋಗಲಾಡಿಸಲು & ಅರಿವು ಮೂಡಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಸಮಾಜದಲ್ಲಿ ಜಾತಿ ಪದ್ಧತಿ ತುಂಬಾ ಆಳವಾಗಿ ಬೇರೂರಿದೆ. 21ನೇ ಶತಮಾನದಲ್ಲೂ ಇಂಥ ಆಚರಣೆ ನಡೀತಿದೆ, ಇದು ಸರಿಯಲ್ಲ. ಜಾತಿ ಎನ್ನುವ ಅನಿಷ್ಟ ಪದ್ಧತಿ ಬಂದುಬಿಟ್ಟಿದೆ. ದಲಿತರ ಮನೆಗೆ ಹೋಗೋದು ಕಾಮನ್. ಈ ಅನಿಷ್ಟ ಪದ್ಧತಿ ಹೋಗಲಾಡಿಸಲು ದಲಿತರ ಮನೆಗೆ ಭೇಟಿ ನೀಡಿದ್ದೇವೆ ಎಂದು ಹೇಳಿದ್ರು.

ಇದನ್ನೂ ಓದಿ :- ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸ‌ನ್ನ ಬಾಲಚಂದ್ರ ವರಳೆ ಪ್ರಮಾಣ ವಚನ ಸ್ವೀಕಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!