ಅಶ್ವತ್ಥ್ ನಾರಾಯಣ್ ಮದ ಇಳಿಸುವುದು ಹೇಗೆ ಅನ್ನೋದು ಕುಮಾರಸ್ವಾಮಿಗೆ ಗೊತ್ತಿದೆ – ಹೆಚ್ಡಿಕೆ

ಹೆಚ್.ಡಿ.ಕೆ ಬಗ್ಗೆ ಸಚಿವ ಡಾ ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಅದೇನೋ ಹೇಳಿದ್ದಾರೇ ಅಲ್ಲ. ಪಂಚತಾರ ಹೋಟೆಲ್ ನಲ್ಲಿ ಬಿಚ್ಚುತ್ತೀನಿ ಅಂತಾ. ಇದೀಗ ಪ್ರತಿನಿತ್ಯ ದೆಹಲಿಯಿಂದ ನಾಯಕರು ಬರುತ್ತಾರೆ ಅಲ್ಲ. ಅಮೀತ್ ಶಾ ಬಂದಾಗ ಎಲ್ಲಿ ಇರಿಸಿದ್ರು. ನಡ್ಡಾ, ಅರುಣ್ ಸಿಂಗ್ ಬಂದಾಗ ಯಾವ ಹೋಟೆಲ್ ನಲ್ಲಿ ಇರಿಸಿದ್ದರು. ಹಾಗಾದ್ರೆ ಅವರು ಹೋಗಬಹುದು ಕುಮಾರಸ್ವಾಮಿ ಹೋಗುವುದು ತಪ್ಪಾ..? ಎಂದು ಪ್ರಶ್ನಿಸಿದ್ದಾರೆ. ನಾನು ಗುಡಿಸಲಿನಲ್ಲೂ ಮಲಗಿದ್ದೀನಿ ಪಂಚತಾರಾ ಹೋಟೆಲ್ ನಲ್ಲೂ ಮಲಗಿದ್ದೀನಿ. ಇವರಿಂದ ನಾನು ಕಲಿಯಬೇಕಿಲ್ಲ. ಅಶ್ವಥ್ ನಾರಾಯಣ್ ನಕಲಿ ಸರ್ಟಿಫಿಕೇಟ್ ಸೃಷ್ಟಿ ಮಾಡುತ್ತಿದ್ದರು. ಈ ಬಗ್ಗೆ ಏನಾದ್ರೂ ಉತ್ತರ ಕೊಟ್ಟಿದ್ದಾರಾ..? ಇವರು ಬಂದಿರೋದೇ ನಕಲಿ ಸರ್ಟಿಫಿಕೇಟ್ ಸರಬರಾಜು ಮಾಡುವ ಮುಖಾಂತರ. 2010 ರಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು ಆಗ ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ ಇಟ್ಟಿದ್ರಲ್ಲಾ..? 15 ಸಾವಿರ ಕೋಟಿ ಕಾಮಗಾರಿ ಎಂದು ಹಗಲು ದರೋಡೆ ಮಾಡಲು ಹೊರಟಿದ್ದರು. ಆ ಹಗಲು ದರೋಡೆಯ ವಿಷಯಗಳನ್ನ ಕೆದಕಿದ್ದು ಜೆಡಿಎಸ್. ದಾಖಲೆಗಳನ್ನ ನಾವು ಜನತೆ ಮುಂದೆ ಇಡಲು ಹೊರಟಾಗ ಅರ್ಧ ರಾತ್ರಿಯಲ್ಲಿ ಬೆಂಕಿ ಇಟ್ಟ ತನಿಖೆ ಮಾಡಿದ ಆರೋಪಿ ಯಾರು ಅಂತ ಹೊರಗೆ ತಂದ್ರಾ.. ಈ ಬಗ್ಗೆ ಯಾಕೆ ಚರ್ಚೆ ಮಾಡಲ್ಲ..? ಇದನ್ನೂ ಓದಿ : –  ಆಗಸ್ಟ್ 15ರಂದು ವೊಲ್ವೊ ಸೇರಿ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ನಾಗಮೋಹನ್ ದಾಸ್ ವರದಿ ಯಾವ್ಯಾವ ಕ್ಷೇತ್ರದಲ್ಲಿ ಏನೇನ್ ಆಗಿದೆ ಎಂದು ವರದಿ ಕೊಟ್ಟಿದ್ದಾರೆ..? ಇದಕ್ಕಾಗಿಯೇ ಸದನ ಕಲಾಪ ಕರೆಯಿರಿ ಎಂದು ಹೇಳಿದ್ದೀನಿ. ಹೋಟೆಲ್ ವಿಚಾರ ಒಂದು ಬಿಟ್ಟರೆ ನನ್ನ ಮೇಲೆ ಚರ್ಚೆ ಮಾಡಲು ಬೇರೆ ವಿಷಯ ಅವರಿಗೆ ಇಲ್ಲ. ಸಿದ್ದರಾಮಯ್ಯ ನಾನು ಸಿಎಂ ಆಗಿದ್ದಾಗ ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ. ಬೆಂಗಳೂರಿನಲ್ಲಿ ಇದ್ದಾಗ ಹತ್ತು ನಿಮಿಷ ವಿಶ್ರಾಂತಿ ಪಡೆಯಲು ಜಾಗ ಎಲ್ಲಿತ್ತು..? ಎಲ್ಲಾ ಸರ್ಕಾರಿ ಬಂಗಲೆಗಳನ್ನ ಇವರೇ ಆವರಿಸಿಕೊಂಡಿದ್ರು, ನನಗೆ ಸರ್ಕಾರಿ ಬಂಗಲೆ ಇರಲಿಲ್ಲ. ನಾನು ಎರಡನೇ ಬಾರಿ ಸಿಎಂ ಆದಾಗ ಸರ್ಕಾರಿ ವಾಹನ ಪಡೆಯಲಿಲ್ಲ. ಪೆಟ್ರೋಲ್ ಪಡೆಯಲಿಲ್ಲ, ಮನೆ ಬಾಡಿಗೆ ಪಡೆಯಲಿಲ್ಲ ಸ್ವಾಭಿಮಾನದಿಂದ ಬದುಕಿದ್ದೇನೆ .ಇವರಿಂದ ಪಾಠ ಕಲಿ ಬೇಕಿಲ್ಲ. ಈಗಿನ ಹಾಗೂ ಹಿಂದಿನ ಮುಖ್ಯಮಂತ್ರಿಗಳು ಪಂಚತಾರ ಹೋಟೆಲ್ ನಲ್ಲಿ ಅಲ್ಲವೇ ಮೀಟಿಂಗ್ ಮಾಡೋದು..? ಈಗಲೂ ಅಲ್ಲೇ ಸೇರುತ್ತಾರೆ ಹಾಗಾದ್ರೆ ಯಾಕೆ ಅಲ್ಲಿ ಸೇರಬೇಕು..? ಕುಮಾರಸ್ವಾಮಿ ಒಬ್ಬ ಇರುವುದು ಮಾತ್ರಾ ಮಹಾನ್ ಅಪರಾಧನಾ..? ಹಾಗಾದ್ರೆ ಇವರೆಲ್ಲಾ ಇರೋದು ಮಹಾನ್ ಘನಂದಾರಿ ಕೆಲಸ ಮಾಡೋದಕ್ಕಾ..? ಎಂದು ವಾಗ್ದಾಳಿ ನಡೆಸಿದ್ದಾರೆ. ಅಶ್ವಥ್ ನಾರಾಯಣ್ ದುಡ್ಡಿನ ಮದದಲ್ಲಿ ಮಾತಾಡುತ್ತಿದ್ದಾರೆ. ದುಡ್ಡು ರಕ್ಷಣೆ ಮಾಡಲ್ಲ. ಅಶ್ವತ್ಥ್ ನಾರಾಯಣ್ ಮದವನ್ನ ಇಳಿಸುವುದು ಹೇಗೆ ಅನ್ನೋದು ಕುಮಾರಸ್ವಾಮಿಗೆ ಗೊತ್ತಿದೆ ಎಂದು ಹೇಳಿದ್ರು.


ಸಿಎಂ ಬದಲಾವಣೆ ವಿಚಾರ
ಸಿಎಂ ಬದಲಾವಣೆಗೂ ನಮಗು ಏನು ಸಂಬಂಧ. ಸಿಎಂ ಇಟ್ಟುಕೊಳ್ತಾರೋ.. ಬದಲಾವಣೆ ಮಾಡುತ್ತಾರೋ.. ಅದನ್ನ ಕಟ್ಟಿಕೊಂಡು ನನಗೇನು..? ನನ್ನ ಗಮನ ಇರೋದು 2023 ಚುನಾವಣೆ ಮೇಲೆ. ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಹಲವಾರು ಬೆಳವಣಿಗೆ ಇರಬಹುದು. ರಾಜ್ಯ ರಾಜಕಾರಣದಲ್ಲಿ ಹಲವಾರು ವಿಚಾರಗಳು ಹೊರಗೆ ಬರುತ್ತಲೇ ಇರುತ್ತೆ. ಯಾವನ್ ಮುಖ್ಯಮಂತ್ರಿ, ಮಂತ್ರಿ ಕಟ್ಟಿಕೊಂಡು ನಮಗೇನು..? ಸಿಎಂ ಬದಲಾವಣೆ ಇದ್ರೂ ಕೂಡ ನಾನ್ಯಾಕೆ ಚರ್ಚೆ ಮಾಡಬೇಕು, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನನ್ನ ಮೊದಲ ಆದ್ಯತೆ ಜನರ ಬದುಕು ಕಟ್ಟಿಕೊಡೋದು ಎಂದು ತಿಳಿಸಿದ್ರು.ಇದನ್ನೂ ಓದಿ : –  ಹಂತಕರು, ಹಂತಕರಿಗೆ ಸಹಕಾರ ನೀಡಿದವರ ಆಸ್ತಿಗಳ ಮುಟ್ಟುಗೋಲು – ADGP ಅಲೋಕ್ ಕುಮಾರ್

ಚಾಮರಾಜಪೇಟೆ ಈದ್ಗಾ ಮೈದಾನ ವಿಚಾರ
ಕಾಂಗ್ರೆಸ್ ಹಾಗೂ ಬಿಜೆಪಿಗೆ ಧರ್ಮದ ದಂಗಲ್ ಜೀವಾಳ. ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ವಿಚಾರವಾಗಿ ಪ್ರತೀ ವರ್ಷ ಜನರನ್ನ ಸಾಯಿಸುತ್ತಿದ್ರು . ದೇವೇಗೌಡರು ಸಿಎಂ ಆಗಿ ಉಳಿಸಿಕೊಟ್ಟರು. ಈಗ ಕರಾವಳಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಧರ್ಮದ ದಂಗಲ್ ಬಂದು ನಿಂತಿದೆ ಎಲ್ಲಿಗೆ ನಿಲ್ಲಿಸುತ್ತಾರೆ ನೋಡೋಣ..? ಎಂದು ಹೇಳಿದ್ರು.


ಕುಮಾರಸ್ವಾಮಿ ಕಲಾಪಗಳಿಗೆ ಬರಲ್ಲ ಅನ್ನೋ ವಿಚಾರ
ನಾನು ಕಲಾಪಕ್ಕೆ ಬರದೇ ಕೊಠಡಿಯಲ್ಲಿ ಕೂತು ಗಮನಿಸುತ್ತೇನೆ. ಎಲ್ಲಿ ನನ್ನ ಉಪಸ್ಥತಿ ಇರಬೇಕೋ ಆಗ ನಾನು ಸದನಕ್ಕೆ ಭಾಗವಹಿಸುತ್ತೇನೆ. ನನ್ನ ಬಗ್ಗೆ ಸದನದಲ್ಲೇ ಸಭಾಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸುತ್ತಾರೆ. 24 ಗಂಟೆ ಟಿಎ, ಡಿಎ ಸಾವಿರ ರೂಪಾಯಿ ಕ್ಲೈಂ ಮಾಡಲು ಸದನಕ್ಕೆ ಹೋಗಲ್ಲ. ಸದನದಲ್ಲಿ ಕಲಾಪ ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ನಡೆಯಲ್ಲ, ಬೇಕಿರದ ವಿಷಯ ಚರ್ಚೆ ಮಾಡಿ ಮುಂದೂಡುತ್ತಾರೆ. ಸದನವನ್ನ ಸರಿಯಾಗಿ ನಡೆಸುವ ಯೋಗ್ಯತೆ ಇವರಿಗೆ ಇಲ್ಲ .ನನ್ನ ಬಗ್ಗೆ ಯಾಕೆ ಚರ್ಚೆ ಮಾಡುತ್ತಾರೆ..? ಎಂದು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : –  ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!